ಸಿಗುವುದೇನಿಲ್ಲಿ
ನನಗೊಂದು ಒಳ್ಳೆಯ ಹೊತ್ತಿಗೆ...?
ತಿಳಿಯಬೇಕಿಂದು ನಾ
ಬಳಸುವುದು ಹೇಗೆಂದು ಇಂಟರ್‍ನೆಟ್ಟು...
ನನಗಿಲ್ಲಿರುವುದು ಬೇಕಿಲ್ಲ,
ಕಳಚಿಕೊಳ್ಳುವೆ ಮೆತ್ತಗೆ...
ದಿನವೂ ಸಿಗುತಿಹುದು
ಬರೀ ಕಸ-ಕೊಳಕು-ಹೊಟ್ಟು...
ಪಡಬಾರದ ಪಾಡು
ನನ್ನ ಪುಟ್ಟ ಹೊಟ್ಟೆಗೆ...
ಗೂಗಲಿಸಬೇಕಿದೆ ನಾ
ಗಿಟ್ಟಿಸಲು ಮೆಚ್ಚಿನಾ ಹಿಟ್ಟು...
--ಶ್ರೀ
’ಚಿತ್ರಕ್ಕಾಗಿ ಕೊರೆ’ ಎಂದು ಕರೆ ನೀಡಿದ
ಬಾಳಿಗರಿಗೆ ನನ್ನಿ! :)
No comments:
Post a Comment