Showing posts with label ನೀಲು. Show all posts
Showing posts with label ನೀಲು. Show all posts

Sunday, May 31, 2009

ಅತ್ತೆಯ ನೋವು

ಬಿಳಿಯ ಮೈಯವಳಾದರೇನು,
ಮಗಳಂತೆ ಸಲುಹಿದೆ ಸೊಸೆಯನ್ನು...
ಜಗಳವೆಂದೂ ಇಲ್ಲ, ಈ ಹೊಸ ಮಗಳೊಡನೆ
ಸೊಸೆ ಕೂಡ ಮಗಳಂತೆ, ಕಿಲಕಿಲನೆ ನಗುನಗುತ ಓಡಾಡಿದಾಗ, ನನಗೂ ಖುಷಿ!
ಮನೆಯವಳಾದಳಲ್ಲ ಹೊರಗಿನವಳೆಂದು !

ಸಮಯ ಉರುಳಿತು...
ಬಳಿಕ ನನ್ನ ಕಿಬ್ಬೊಟ್ಟೆಯ ನೋವು ಹೆಚ್ಚಾಗಿ
ಕೊನೆಗೆ ನೋವು ತಡೆಯಲಾರದೆ ನೋಡಿಕೊಂಡೆ ಏನಾಗಿದೆಯೆಂದು...
ಆಗಲೇ ನನಗೆ ಕಂಡದ್ದು, ನನ್ನಳೊಗೆ ಆಳವಾಗಿಳಿದ ಮಿರಿ-ಮಿರಿ ಮಿಂಚುವ ಚಾಕು ...
ಆ ಕಿಲಕಿಲ ನಗು ಹೆಚ್ಚಾಗಿತ್ತು...

-ಶ್ರೀ

Tuesday, October 28, 2008

ದಿಟಕೆ ದಿಟವೇ ಶತ್ರು!

ಕಣ್ಣ ಮುಂದೆ
ರಾಚಿದೆ ದಿಟವು...
ಪುರಾವೆಯಿಲ್ಲ
ಪ್ರಮಾಣಿಸಲು...

ಹಳಸಿದ್ದನ್ನು
ಎತ್ತಿ ಹಿಡಿದರು,
ರಾಚುವ ದಿಟವ
ಹುಸಿಯೆಂದು ತೋರಲು...

-- ಶ್ರೀ

Monday, October 13, 2008

ಕಲೆಗುಂಟೇ ನೆಲೆಯ ಬಲೆ?

ಇಲ್ಲ ಕಲೆಗೆ ನೆಲೆಯ ಬಲೆ.
ಕಲ್ಲ ಕುಸುರಿ ಕನ್ನಡಿಗನಿಗೇ ಎನ್ನಲು,
ಬಲ್ಲಿದ ಬೇಲೂರ ಚೆನ್ನಿಗ ಮೆಚ್ಚುವನೇ?

--ಶ್ರೀ

Tuesday, September 30, 2008

ನಿಂದಕರೆಂದಿಗೂ ಸಂತರೇ ಅಲ್ಲ

ನಿಂದಕರೆಂದಿಗೂ
ಸಂತರೇ ಅಲ್ಲ
ನಿಂದಕರಿಂದ
ಸಂತಸವಿಲ್ಲ
ನಿಂದಕರಾದ
"ಸಂತ"ರು ಇರಲು,
ಸಂತೆಯಲಿದ್ದವಗೆ*
ಚಂದವು† ಇಲ್ಲ...

--ಶ್ರೀ

*ಸಂತೆಯಲಿದ್ದವ = ಜನ ಸಾಮಾನ್ಯ
†ಚಂದ = ಏಳಿಗೆ