ಚೆಲುವಿನ ಬಗ್ಗೆ ನಮಗೆ
ಒಂದು ರೀತಿಯ ಹುಚ್ಚು
ಇಲ್ಲವೋ ಬಹಳ ಅಸಡ್ಡೆ
ಬಿದಿಗೆ-ಹುಣ್ಣಿಮೆಯಲ್ಲದ
ಆ ಚಂದಿರನೂ
ಬರೀ ಬಿಳಿಯ ಗುಡ್ಡೆ
ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ... ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Showing posts with label ಚುಟುಕ. Show all posts
Showing posts with label ಚುಟುಕ. Show all posts
Monday, November 25, 2013
Tuesday, November 12, 2013
Friday, October 4, 2013
ಅಲಂಕಾರ
ಕನ್ನಡಿಯ ಮುಂದೆ
ನಿಂತು
ಘಂಟೆಗಟ್ಟಲೆ
ಸಜ್ಜಾಗುತ್ತಿದ್ದವಳ
ಅಲಂಕಾರವನ್ನು
ನೋಡಿ,
’ಉತ್ಪ್ರೇಕ್ಷೆ’
ತಲೆ ತಗ್ಗಿಸಿತು...
ಶ್ರೀ
(3-ಅಕ್ಟೋಬರ್-2013)
ದೃಷ್ಟಿ ಬೊಟ್ಟು
ನಲ್ಲೆ,
ನಿನ್ನ
ಚೆಲುವಿನ ಮೇಲೆ
ದೃಷ್ಟಿ ಬೀಳದಿರಲು,
ಕಣ್ಣ ಪಾಪೆಯ
ತೆಗೆದು
ಗಲ್ಲದ ಮೇಲಿಡಲೇ?
-ಶ್ರೀ
(1-oct-2013)
ನಿನ್ನ
ಚೆಲುವಿನ ಮೇಲೆ
ದೃಷ್ಟಿ ಬೀಳದಿರಲು,
ಕಣ್ಣ ಪಾಪೆಯ
ತೆಗೆದು
ಗಲ್ಲದ ಮೇಲಿಡಲೇ?
-ಶ್ರೀ
(1-oct-2013)
Friday, March 15, 2013
ಐ ಮಿಸ್ ಯು!
ಮುನ್ನೂರರವತ್ತೈದು
ದಿನವೂ
ಸೋರುವ ಮೂಗಿನ
ಒಡೆಯನ,
ನೆಗಡಿ
ಆಕಸ್ಮಿಕವಾಗಿ ನಿಂತಾಗ
ಮೆಲ್ಲನೆ ತನ್ನಷ್ಟಕ್ಕೆ ತಾನೇ
ಉಸರಿದ,
"ಐ ಮಿಸ್ ಯು!"
--ಶ್ರೀ
೧೫-ಮಾರ್ಚ್-೨೦೧೩
ದಿನವೂ
ಸೋರುವ ಮೂಗಿನ
ಒಡೆಯನ,
ನೆಗಡಿ
ಆಕಸ್ಮಿಕವಾಗಿ ನಿಂತಾಗ
ಮೆಲ್ಲನೆ ತನ್ನಷ್ಟಕ್ಕೆ ತಾನೇ
ಉಸರಿದ,
"ಐ ಮಿಸ್ ಯು!"
--ಶ್ರೀ
೧೫-ಮಾರ್ಚ್-೨೦೧೩
Friday, January 25, 2013
’ದುರಂತ’ ಲೇಖಕನ ಸ್ವಗತ
ನನ್ನಿಂದಾಗಿ
ನೀನು ಸುರಿಸಿದ
ಕಣ್ಣೀರ ಹನಿ
ನನ್ನ
ಹಲವಾರು
ಯಶಸ್ವೀ ಬರಹಗಳಿಗೆ
ಬಂಡವಾಳ!
--ಶ್ರೀ
೨೪-ಜನವರಿ-೨೦೧೩
ನೀನು ಸುರಿಸಿದ
ಕಣ್ಣೀರ ಹನಿ
ನನ್ನ
ಹಲವಾರು
ಯಶಸ್ವೀ ಬರಹಗಳಿಗೆ
ಬಂಡವಾಳ!
--ಶ್ರೀ
೨೪-ಜನವರಿ-೨೦೧೩
Sunday, November 11, 2012
ಪ್ರತಿಬಿಂಬ
ಪ್ರಿಯೆ,
ನನ್ನ ಈ ಹೃದಯ
ಇಷ್ಟೊಂದು
ಸುಂದರವೆಂದು
ನಿನ್ನ ಕಂಗಳಳೊಳಗೆ
ಇಣುಕಿ ನೋಡುವವರೆಗೂ
ತಿಳಿದೇ ಇರಲಿಲ್ಲ...
--ಶ್ರೀ
ನನ್ನ ಈ ಹೃದಯ
ಇಷ್ಟೊಂದು
ಸುಂದರವೆಂದು
ನಿನ್ನ ಕಂಗಳಳೊಳಗೆ
ಇಣುಕಿ ನೋಡುವವರೆಗೂ
ತಿಳಿದೇ ಇರಲಿಲ್ಲ...
--ಶ್ರೀ
Friday, November 9, 2012
ನಿನ್ನಲ್ಲಿರುವುದು ರಕುತವಲ್ಲ...
ನಲ್ಲೆ,
ನಿನ್ನ ಧಮನಿಗಳಲ್ಲಿ
ಹರಿಯುವುದು
ನೆತ್ತರಲ್ಲ...
ಅದು ನೆತ್ತರಲ್ಲ...
ಮಧುವಿರಬೇಕು...
ಬರಿಯ ನೆತ್ತರಿಂದಲೇ
ನಿನ್ನಧರ ಇಂತಿಷ್ಟು
ಮಧುರವಾಗಿರಲು
ಸಾಧ್ಯವೇ?
--ಶ್ರೀ
ನಿನ್ನ ಧಮನಿಗಳಲ್ಲಿ
ಹರಿಯುವುದು
ನೆತ್ತರಲ್ಲ...
ಅದು ನೆತ್ತರಲ್ಲ...
ಮಧುವಿರಬೇಕು...
ಬರಿಯ ನೆತ್ತರಿಂದಲೇ
ನಿನ್ನಧರ ಇಂತಿಷ್ಟು
ಮಧುರವಾಗಿರಲು
ಸಾಧ್ಯವೇ?
--ಶ್ರೀ
Wednesday, November 7, 2012
ತಕರಾರು
ನಲ್ಲೆ,
ನನ್ನ ತರಕಾದ ಕೆನ್ನೆಯ
ಬಗ್ಗೆ ತಕರಾರು ಎತ್ತಬೇಡ
ಗಡ್ಡ ಬೆಳೆಯದಂತೆ
ತಪ್ಪದೇ ಮುಲಾಮು
ಹಚ್ಚದಿದ್ದದ್ದು
ನಿನ್ನ ತಪ್ಪಲ್ಲವೇ?
-ಶ್ರೀ
ನನ್ನ ತರಕಾದ ಕೆನ್ನೆಯ
ಬಗ್ಗೆ ತಕರಾರು ಎತ್ತಬೇಡ
ಗಡ್ಡ ಬೆಳೆಯದಂತೆ
ತಪ್ಪದೇ ಮುಲಾಮು
ಹಚ್ಚದಿದ್ದದ್ದು
ನಿನ್ನ ತಪ್ಪಲ್ಲವೇ?
-ಶ್ರೀ
Tuesday, November 6, 2012
Thursday, November 1, 2012
ಕಿರಿದಾದ ಲೋಕ
ಇನಿಯ,
ನಿನ್ನ
ಈ ಎದೆಯ
ಮೇಲೆ
ತಲೆಯನು
ಪ್ರತಿ ಬಾರಿ
ಆನಿಸಿದಾಗಲೆಲ್ಲ
ಈ ಪ್ರಪಂಚ
ಅದೆಷ್ಟು ಕಿರಿದು
ಎಂದು ಅನಿಸುವುದೇಕೇ?
--ಶ್ರೀ
(ನವಂಬರ್ ೧ ೨೦೧೨)
ಚಿತ್ರ ಇಲ್ಲಿಂದ ಹೆಕ್ಕಿದ್ದು: http://thehomelook.blogspot.com/2010/07/lets-go-to-bed-honey.html
Monday, March 12, 2012
ನಲ್ಲೆ, ನೀ ಕನಸ ಕಾಣು...
ನಲ್ಲೆ,
ನೀ ಕನಸ ಕಾಣು...
ನೀ ಕನಸ ಕಾಣು
ಹತ್ತು ಹಲವಾರು...
ನಾನಿರುವೆ ಇಲ್ಲೇ
ನಿನ್ನೊಡನೆ ಸದಾ
ಎಂದೆಂದಿಗೂ
ನಡೆಸಿಕೊಡಲು
ನಿನ್ನ ಕನಸಿನ
ಅಹವಾಲು!
--ಶ್ರೀ
೯-ಮಾರ್ಚ್-೨೦೧೨
ನೀ ಕನಸ ಕಾಣು...
ನೀ ಕನಸ ಕಾಣು
ಹತ್ತು ಹಲವಾರು...
ನಾನಿರುವೆ ಇಲ್ಲೇ
ನಿನ್ನೊಡನೆ ಸದಾ
ಎಂದೆಂದಿಗೂ
ನಡೆಸಿಕೊಡಲು
ನಿನ್ನ ಕನಸಿನ
ಅಹವಾಲು!
--ಶ್ರೀ
೯-ಮಾರ್ಚ್-೨೦೧೨
Thursday, September 1, 2011
ನುಣುಪಾದ ಕೆನ್ನೆಯ ಗುಟ್ಟು
ಚೆಲುವೆ,
ಮೊದಲಿಗಿಂತಲೂ
ಹೆಚ್ಚು
ನುಣುಪಾದ
ನಿನ್ನ ಕೆನ್ನೆಗೆ
ಸದಾ ನಾನಿಡುವ
ಮುತ್ತಿನ ಸುರಿಮಳೆಯೇ
ಕಾರಣವಲ್ಲವೇ?
*
ಸರಸಕ್ಕೆಂದು
ಸನಿಹಕೆ ಬಂದಾಗ
ಸರ್ರನೆ ದೂರ
ಸರಿಯುವ
ನಿನ್ನ ಮನದಲ್ಲಿ
ನಾನು
ಮತ್ತೆ ಹಿಡಿದು
ಮುದ್ದಾಡಬೇಕೆಂಬ
ಬಯಕೆ ಇದೆಯೆಂದು
ನನಗೂ ಗೊತ್ತು :)
--ಶ್ರೀ
೨ ಸೆಪ್ಟೆಂಬರ್ ೨೦೧೧
ಮೊದಲಿಗಿಂತಲೂ
ಹೆಚ್ಚು
ನುಣುಪಾದ
ನಿನ್ನ ಕೆನ್ನೆಗೆ
ಸದಾ ನಾನಿಡುವ
ಮುತ್ತಿನ ಸುರಿಮಳೆಯೇ
ಕಾರಣವಲ್ಲವೇ?
*
ಸರಸಕ್ಕೆಂದು
ಸನಿಹಕೆ ಬಂದಾಗ
ಸರ್ರನೆ ದೂರ
ಸರಿಯುವ
ನಿನ್ನ ಮನದಲ್ಲಿ
ನಾನು
ಮತ್ತೆ ಹಿಡಿದು
ಮುದ್ದಾಡಬೇಕೆಂಬ
ಬಯಕೆ ಇದೆಯೆಂದು
ನನಗೂ ಗೊತ್ತು :)
--ಶ್ರೀ
೨ ಸೆಪ್ಟೆಂಬರ್ ೨೦೧೧
Monday, July 25, 2011
ಮೌನ-ತಾಪ
ದಿನಪೂರ್ತಿ
ಹೆಂಡತಿಯ
ಮೌನವ್ರತದಿಂದ
ತಲೆಕೆಟ್ಟು
ಕಂಗೆಟ್ಟಿದ್ದ
ಗಂಡನಿಗೆ,
ಅವಳು,
’ಥೂ...ಹಾಳಾದ್ದು...
ಲಿಪ್‍ಸ್ಟಿಕ್ ಕಳೆದುಹೋಯ್ತು’
ಎಂದು
ಕನಸಲಿ ಉಲಿದಾಗ
ನೆಮ್ಮದಿ-ನಿಟ್ಟುಸಿರು-ನಿದ್ದೆ...
--ಶ್ರೀ
೨೪-ಜುಲೈ-೨೦೧೧
ಹೆಂಡತಿಯ
ಮೌನವ್ರತದಿಂದ
ತಲೆಕೆಟ್ಟು
ಕಂಗೆಟ್ಟಿದ್ದ
ಗಂಡನಿಗೆ,
ಅವಳು,
’ಥೂ...ಹಾಳಾದ್ದು...
ಲಿಪ್‍ಸ್ಟಿಕ್ ಕಳೆದುಹೋಯ್ತು’
ಎಂದು
ಕನಸಲಿ ಉಲಿದಾಗ
ನೆಮ್ಮದಿ-ನಿಟ್ಟುಸಿರು-ನಿದ್ದೆ...
--ಶ್ರೀ
೨೪-ಜುಲೈ-೨೦೧೧
Labels:
ಗಂಡ-ಹೆಂಡತಿ,
ಚುಟುಕ,
ಸಂಸಾರ
Saturday, July 23, 2011
ಆರೈಕೆ
ನಿತ್ಯ ನೀರೆರೆದು
ಹೂಗಿಡಗಳ
ಬೆಳೆಸುವುದು
ಕಷ್ಟವೆಂದು
ಮನೆಯೊಳು ತಂದಿಟ್ಟ
ಪ್ಲಾಸ್ಟಿಕ್ ಹೂಗಳೂ
ಬಾಡುವುದು
ಮಾಸುವುದು
ಸಮಯದಿ
ಧೂಳ ಕೊಡವದಿರಲು...
--ಶ್ರೀ
ಹೂಗಿಡಗಳ
ಬೆಳೆಸುವುದು
ಕಷ್ಟವೆಂದು
ಮನೆಯೊಳು ತಂದಿಟ್ಟ
ಪ್ಲಾಸ್ಟಿಕ್ ಹೂಗಳೂ
ಬಾಡುವುದು
ಮಾಸುವುದು
ಸಮಯದಿ
ಧೂಳ ಕೊಡವದಿರಲು...
--ಶ್ರೀ
Thursday, June 30, 2011
ಪರೋಪಕಾರಾರ್ಥಮಿದಂ ಶರೀರಂ - genX version
ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಮಿದಂ ಶರೀರಂ
ಇದು ಒಂದು ಜನಜನಿತ ಸುಭಾಷಿತ...
ಇದಕ್ಕೆ ಒಪ್ಪಾಗಿ ಹಂಸಾನಂದಿಯವರು ಈ ರೀತಿ ಕನ್ನಡಕ್ಕೆ ಅನುವಾದಿಸಿದ್ದಾರೆ:
ಬೇರೆಯವರಿಗೆಂದೇ ಹಣ್ಣನೀಯುವುವು ಮರಗಳು
ಬೇರೆಯವರಿಗೆಂದೇ ಹರಿಯುವುವು ನದಿಗಳು
ಬೇರೆಯವರಿಗೆಂದೇ ಹಾಲ್ಕರೆಯುವುದು ಹಸುಗಳು
ಬೇರೆಯವರಿಗಿಂಬಾಗಿರಲಿ ನಮ್ಮ ಜೀವನವೂ!
ಇದೇ ಹೂರಣವನಿಟ್ಟು, ಹೊಸ ಓರಣವ ಮಾಡಿ, ಕಾಲಕ್ಕೆ ತಕ್ಕಂತೆ ಹೀಗೆ ಹೇಳಿದರೆ ಹೇಗೆ?
ತನ್ನ ಮೈ ಸುಟ್ಟುಕೊಂಡು ಬೆಳಕ ಕೊಡುವ ಟಂಗ್‍ಸ್ಟನ್‍ನಂತೆ
ತನ್ನ ಮೈ ಸವೆಸುತ ಶುಚಿಗೊಳಿಸುವ ಸೋಪಿನಂತೆ
ತನ್ನ ಮೈ ಹಿಚಕಿಸಿಕೊಂಡು ಮದ್ದನೀವ ಆಯಿಂಟ್‍ಮೆಂಟ್ ಟ್ಯೂಬಿನಂತೆ
ಬೇರೆಯವರಿಗಾಗಿ ಮುಡಿಪಿರಲಿ ನಮ್ಮ ಜೀವನವೂ...
--ಶ್ರೀ
ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಮಿದಂ ಶರೀರಂ
ಇದು ಒಂದು ಜನಜನಿತ ಸುಭಾಷಿತ...
ಇದಕ್ಕೆ ಒಪ್ಪಾಗಿ ಹಂಸಾನಂದಿಯವರು ಈ ರೀತಿ ಕನ್ನಡಕ್ಕೆ ಅನುವಾದಿಸಿದ್ದಾರೆ:
ಬೇರೆಯವರಿಗೆಂದೇ ಹಣ್ಣನೀಯುವುವು ಮರಗಳು
ಬೇರೆಯವರಿಗೆಂದೇ ಹರಿಯುವುವು ನದಿಗಳು
ಬೇರೆಯವರಿಗೆಂದೇ ಹಾಲ್ಕರೆಯುವುದು ಹಸುಗಳು
ಬೇರೆಯವರಿಗಿಂಬಾಗಿರಲಿ ನಮ್ಮ ಜೀವನವೂ!
ಇದೇ ಹೂರಣವನಿಟ್ಟು, ಹೊಸ ಓರಣವ ಮಾಡಿ, ಕಾಲಕ್ಕೆ ತಕ್ಕಂತೆ ಹೀಗೆ ಹೇಳಿದರೆ ಹೇಗೆ?
ತನ್ನ ಮೈ ಸುಟ್ಟುಕೊಂಡು ಬೆಳಕ ಕೊಡುವ ಟಂಗ್‍ಸ್ಟನ್‍ನಂತೆ
ತನ್ನ ಮೈ ಸವೆಸುತ ಶುಚಿಗೊಳಿಸುವ ಸೋಪಿನಂತೆ
ತನ್ನ ಮೈ ಹಿಚಕಿಸಿಕೊಂಡು ಮದ್ದನೀವ ಆಯಿಂಟ್‍ಮೆಂಟ್ ಟ್ಯೂಬಿನಂತೆ
ಬೇರೆಯವರಿಗಾಗಿ ಮುಡಿಪಿರಲಿ ನಮ್ಮ ಜೀವನವೂ...
--ಶ್ರೀ
Friday, June 10, 2011
ಜ್ಞಾನೋದಯ
ಹೆತ್ತವರು
ತಿದ್ದಲು
ತಿಪ್ಪರಲಾಗ ಹೊಡೆದರೂ
ನೆಟ್ಟಗಾಗದ ಗುಣ
ತನ್ನ ಪುಟ್ಟ ಕಂದ
ತನ್ನ ಪ್ರತಿರೂಪವೇ
ಎಂದು
ತಿಳಿದಾಗಲೇ
ತಪ್ಪಿನರಿವಾಗುವುದು!
--ಶ್ರೀ
(೧೦-ಜೂನ್-೨೦೧೧)
ತಿದ್ದಲು
ತಿಪ್ಪರಲಾಗ ಹೊಡೆದರೂ
ನೆಟ್ಟಗಾಗದ ಗುಣ
ತನ್ನ ಪುಟ್ಟ ಕಂದ
ತನ್ನ ಪ್ರತಿರೂಪವೇ
ಎಂದು
ತಿಳಿದಾಗಲೇ
ತಪ್ಪಿನರಿವಾಗುವುದು!
--ಶ್ರೀ
(೧೦-ಜೂನ್-೨೦೧೧)
Wednesday, March 23, 2011
ಬಣ್ಣ ಅಳಿಸಿತು...
ಅಳಿಸಿದಳು ಬಣ್ಣವ
ಇಳಿದಿದ್ದ
ತಿಳಿಹಳದಿ
ಕಡುಗೆಂಪು
ಪಚ್ಚೆ-ನೀಲಿ
ಎಲ್ಲವನು ಅಳಿಸಿದಳು
ಬಣ್ಣಗಳ ಕಂಡೊಡನೆ
ಸಿಡುಕು-ಕಿಡಿ ನೋಟ
ಇಂತಿಷ್ಟು ಬಿಡದೆ
ಅಳಿಸಿದಳವಳು...
ಎಲ್ಲವೂ ಮಾಯವಾದಾಗ
ನೆಮ್ಮದಿಯ ನಿಟ್ಟುಸಿರು,
ರಸ್ತೆ ಗುಡಿಸುವಾಕೆಗೆ... :)
--ಶ್ರೀ
೨೩-ಮಾರ್ಚ್-೨೦೧೧
Wednesday, February 9, 2011
ಎಲ್ಲಮ್ಮನ ಜಾತ್ರೆ

ಇತ್ತೀಚಿನ ದಿನಗಳಲ್ಲಿ
ವೈದ್ಯ ಎಂಬುವನು
ರೋಗಿಯ
ಹೊಟ್ಟೆ ಕತ್ತರಿಸಿ
ಗುಣಪಡಿಸುವ ಬದಲಾಗಿ
ರೋಗಿಯ
ಜೇಬು ಕತ್ತರಿಸಿ
ತನ್ನ ಹೊಟ್ಟೆ
ತುಂಬಿಸಿಕೊಳ್ಳುತ್ತಿದ್ದಾನೆ...
--ಶ್ರೀ
(೧೦-ಫೆಬ್ರವರಿ-೨೦೧೧)
ಚಿತ್ರ ಕೃಪೆ: http://www.pointsincase.com/
Sunday, February 6, 2011
ತರಚು ಗಾಯ
ಬೈಕ್‍ನಲ್ಲಿ ಹೋಗುವಾಗ
ಕಾಲಿಗೆ
ತರಚು ಗಾಯವಾಯ್ತೆಂದು
ತನಗೆ ತಗುಲಿಸಿದ
ಟಾಕ್ಸಿ ಡ್ರೈವರ್ ಜೊತೆ
ರಸ್ತೆ ಮಧ್ಯೆ
ವಾಗ್ವಾದಕ್ಕಿಳಿದ
ಟಪೋರಿಗೆ
ಒಂದು ಕಿಲೋಮೀಟರ್
ಉದ್ದದ ಟ್ರಾಫಿಕ್ ಜ್ಯಾಮ್ ಹಿಂದೆ
ಆಂಬುಲೆನ್ಸ್‍ನಲ್ಲಿದ್ದ
ಪ್ರಾಣಪಕ್ಷಿ
ಹಾರಿಹೋಯ್ತೆಂಬ ಅರಿವಿರಲಿಲ್ಲ...
--ಶ್ರೀ
(೬-ಫೆಬ್ರವರಿ-೨೦೧೧)
ಕಾಲಿಗೆ
ತರಚು ಗಾಯವಾಯ್ತೆಂದು
ತನಗೆ ತಗುಲಿಸಿದ
ಟಾಕ್ಸಿ ಡ್ರೈವರ್ ಜೊತೆ
ರಸ್ತೆ ಮಧ್ಯೆ
ವಾಗ್ವಾದಕ್ಕಿಳಿದ
ಟಪೋರಿಗೆ
ಒಂದು ಕಿಲೋಮೀಟರ್
ಉದ್ದದ ಟ್ರಾಫಿಕ್ ಜ್ಯಾಮ್ ಹಿಂದೆ
ಆಂಬುಲೆನ್ಸ್‍ನಲ್ಲಿದ್ದ
ಪ್ರಾಣಪಕ್ಷಿ
ಹಾರಿಹೋಯ್ತೆಂಬ ಅರಿವಿರಲಿಲ್ಲ...
--ಶ್ರೀ
(೬-ಫೆಬ್ರವರಿ-೨೦೧೧)
Labels:
ಅವ್ಯವಸ್ಥೆ,
ಚುಟುಕ,
ಟ್ರಾಫಿಕ್,
ಸಾಮಾಜಿಕ ಪ್ರಜ್ಞೆ
Subscribe to:
Posts (Atom)

