Showing posts with label ಮಕ್ಕಳು. Show all posts
Showing posts with label ಮಕ್ಕಳು. Show all posts

Friday, June 10, 2011

ಜ್ಞಾನೋದಯ

ಹೆತ್ತವರು
ತಿದ್ದಲು
ತಿಪ್ಪರಲಾಗ ಹೊಡೆದರೂ
ನೆಟ್ಟಗಾಗದ ಗುಣ
ತನ್ನ ಪುಟ್ಟ ಕಂದ
ತನ್ನ ಪ್ರತಿರೂಪವೇ
ಎಂದು
ತಿಳಿದಾಗಲೇ
ತಪ್ಪಿನರಿವಾಗುವುದು!

--ಶ್ರೀ
(೧೦-ಜೂನ್-೨೦೧೧)

Tuesday, December 1, 2009

ಬಯ್ಗುಳ ತಿನ್ನುವುದು ಯಾರಿಗೆ ಮೆಚ್ಚು?




ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!
ತುಂಟಾಟವಾಡುವ ತಂಟೆಕೋರನ ಕೇಳಿ...
ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?
ನೂರಾರು ಬಾರಿ ಬಯ್ಗಳವ ತಿಂದರೂ
ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ!