Tuesday, September 18, 2007

ಮತ್ತೆ ಬುದ್ಧಿ ಕಲಿಸಿದ ಕಾಗೆ; 'ಸರ್ವೈವಲ್ ಒಫ್ ದ ಫಿಟ್ಟೆಸ್ಟ್'

ಬೆಂಗಳೂರು ಕಾಂಕ್ರೀಟ್ ಕಾಡಾಗುತಿದ್ದರೂ ಕಾಗೆಗಳು ಮಾತ್ರ ಹೆಚ್ಚೇ ಆಗಿವೆ ಎಂಬುದು ನನ್ನ ಅನಿಸಿಕೆ. ಎಲ್ಲೆಡೆ ಮರಗಳು ಉರುಳುತ್ತಿದ್ದರೂ ಕಾಗೆಗಳು ಹೇಗಪ್ಪ ಉಳಿದಿವೆ ಎಂಬುದು ತಲೆ ಕೆರೆದುಕೊಳ್ಳುವಂಥಹಾ ವಿಷಯವೇ!

ಇತ್ತೀಚಿಗೆ ಮನೆ-ಕಟ್ಟುವವರ(ಬಾರ್-ಬೆಂಡರ್ಸ್, ಮೇಸ್ತ್ರಿ) ಬಳಿ ಮಾತಾಡುತ್ತಿದ್ದಾಗ ತಿಳಿದು ಬಂದಿದ್ದೇನೆಂದರೆ, ಕಾಗೆಗಳು ಮಾನವರು ಮನೆ ಕಟ್ಟಲು ಬಳಸುವ ಬೈಂಡಿಂಗ್-ವೈರ್ ಗಳಿಂದ ಗೂಡುಗಳನ್ನು ಕಟ್ಟಲು ಕಲಿತಿವೆ ಎಂದು...
ಈ ಕಾರಣಕ್ಕೆ ಮೇಸ್ತ್ರಿ ಬೈಂಡಿಂಗ್-ವೈರ್ ಗಳನ್ನು ಕಾಗೆಗಳಿಗೆ ಸಿಗದಂತೆ ಬಚ್ಚಿಡುತಿದ್ದ...!

ಮೇಸ್ತ್ರಿಯ ಜೊತೆ ಮಾತಾಡುವ ಎರಡು ದಿನಗಳ ಮುಂಚೆಯಷ್ಟೆ ಮರದ ಕಡ್ಡಿಯ ಬದಲು ವೈರ್ ಹಿಡಿದ ಕಾಗೆಯ ಮೂರ್ಖತನಕ್ಕೆ ನಾನು ಮರುಗಿದ್ದೆ. ಕಾಗೆಯ ಬುದ್ಧಿಶಕ್ತಿಯನ್ನು ಕಡೆಗಣಿಸಿದ ನಾನು ಮೂರ್ಖನಾಗಿದ್ದೆ ಅಷ್ಟೆ...!

'ಸರ್ವೈವಲ್ ಒಫ್ ದ ಫಿಟ್ಟೆಸ್ಟ್' ಸಿದ್ಧಾಂತಕ್ಕೆ ಕಣ್ಣೆದುರೇ ಕಂಡ ಉದಾಹರಣೆ.

ಸುತ್ತ-ಮುತ್ತಲ ಪ್ರಕೃತಿಗೆ ತಕ್ಕಂತೆ ತಮ್ಮ ಪ್ರಕೃತಿಯನ್ನು ಬದಲಿಸದರೆ ಮಾತ್ರವಲ್ಲವೆ ನಾವು ಉಳಿಯುವುದು? ಜಾಣ ಕಾಗೆಗಳು ತಮ್ಮ ಬದುಕನ್ನು ಸುರಕ್ಷಿತಗೊಳಿಸುವುದನ್ನು ಆಗಲೇ ಕಲಿತಿವೆ...ನೀವು ಕಲಿತಿರುವಿರಾ??

-ಶ್ರೀನಿವಾಸ್, ೧೮ ಸೆಪ್ಟೆಂಬರ್ ೨೦೦೭

(ಕಾಗೆಯು ನನಗೆ ಕಲಿಸಿದ ಮೊದಲ ಪಾಠದ ಬಗ್ಗೆ ಕುತೂಹಲವಿದ್ದಲ್ಲಿ ಓದಿ:
ಜಂಬದ ಕಾಗೆ )

3 comments:

Madhukar said...

Papa kAghe ghe Bangalori'nelli kadigalle sigathilla.

Unknown said...

Swalpa varshagala nanthara, kaage galu nimma manege moulding haakuvaga concrete thegedu kondu hogi thamma guudannu katta bahudu ;-)

Unknown said...

Set your pic straight.