ಪರೋಪಕಾರಾಯ ಫಲಂತಿ ವೃಕ್ಷಾ:
ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವ:
ಪರೋಪಕಾರಾರ್ಥಮಿದಂ ಶರೀರಂ
ಇದು ಒಂದು ಜನಜನಿತ ಸುಭಾಷಿತ...
ಇದಕ್ಕೆ ಒಪ್ಪಾಗಿ ಹಂಸಾನಂದಿಯವರು ಈ ರೀತಿ ಕನ್ನಡಕ್ಕೆ ಅನುವಾದಿಸಿದ್ದಾರೆ:
ಬೇರೆಯವರಿಗೆಂದೇ ಹಣ್ಣನೀಯುವುವು ಮರಗಳು
ಬೇರೆಯವರಿಗೆಂದೇ ಹರಿಯುವುವು ನದಿಗಳು
ಬೇರೆಯವರಿಗೆಂದೇ ಹಾಲ್ಕರೆಯುವುದು ಹಸುಗಳು
ಬೇರೆಯವರಿಗಿಂಬಾಗಿರಲಿ ನಮ್ಮ ಜೀವನವೂ!
ಇದೇ ಹೂರಣವನಿಟ್ಟು, ಹೊಸ ಓರಣವ ಮಾಡಿ, ಕಾಲಕ್ಕೆ ತಕ್ಕಂತೆ ಹೀಗೆ ಹೇಳಿದರೆ ಹೇಗೆ?
ತನ್ನ ಮೈ ಸುಟ್ಟುಕೊಂಡು ಬೆಳಕ ಕೊಡುವ ಟಂಗ್‍ಸ್ಟನ್‍ನಂತೆ
ತನ್ನ ಮೈ ಸವೆಸುತ ಶುಚಿಗೊಳಿಸುವ ಸೋಪಿನಂತೆ
ತನ್ನ ಮೈ ಹಿಚಕಿಸಿಕೊಂಡು ಮದ್ದನೀವ ಆಯಿಂಟ್‍ಮೆಂಟ್ ಟ್ಯೂಬಿನಂತೆ
ಬೇರೆಯವರಿಗಾಗಿ ಮುಡಿಪಿರಲಿ ನಮ್ಮ ಜೀವನವೂ...
--ಶ್ರೀ
No comments:
Post a Comment