Wednesday, January 26, 2011

ದೂರು

ಇನಿಯ, ನೀ ಹೇಳು...

ನೀ ಕೊಡುವ ಮುತ್ತ-ಮಳೆಯಲಿ ತೋಯದೇ, ಹೇಗೆ ನಿದ್ರಿಸಲಿ?
ತಲೆಯಾನಿಸಿ ಮಲಗುವ ವಿಶಾಲ ಎದೆಯಿಲ್ಲದೆ, ಹೇಗೆ ನಿದ್ರಿಸಲಿ?
ನಿನ್ನ ತೋಳ್ಗಳ ಬಿಗಿ-ಬಿಸಿ ಅಪ್ಪುಗೆಯಿಲ್ಲದೆ, ಹೇಗೆ ನಿದ್ರಿಸಲಿ?
ನಿನ್ನ ತುಟಿಯ ರಸವನು ಸವಿಯದೇ, ಹೇಗೆ ನಿದ್ರಿಸಲಿ?
ಬೆಚ್ಚನೆ ಹೊದಿಕೆಯನು ಹೊದಿಸಿ ರಮಿಸುವ ನೀನಿಲ್ಲದೆ ಹೇಗೆ ನಿದ್ರಿಸಲಿ?
ಸವಿನಿದ್ದೆಯನು ಕದ್ದ ಮುದ್ದುಮೊಗದವನೇ,
ನೀನಿಲ್ಲದೇ ಸವಿಗನಸ ಹೇಗೆ ಕಾಣಲಿ ಇನಿಯ...ಹೇಳು...ಹೇಳು...

--ಶ್ರೀ

No comments: