Tuesday, November 24, 2009

ಕೊರೆತ...



ಕಡಲ ಕೊರೆತಕೇನೋ
ಇಡಬಹುದು ಬಂಡೆಗಳ...
ನಿನ್ನ ಮೌನದಿಂದ
ಹೃದಯದಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಸಖೀ???

--ಶ್ರೀ

2 comments:

ರಾಜೀವ said...

"ಮೌನಂ ಸಮ್ಮತಿ ಲಕ್ಷಣಮ್". ನಿಮ್ಮ ಭಾವನೆಗಳಿಗೆ ಮೌನದಿಂದ ಒಪ್ಪುಗೆಯನ್ನು ಸೂಚಿಸಿದರೆ ನಿಮ್ಮಲ್ಯಾಕೆ ಕೊರೆತ?

ಹೆಚ್ಚು ಗೃಹಸ್ತರು, ತನ್ನ ಸಖಿ ಮೌನದಿಂದಿರಬಾರದೆ, ಎಂದು ಆಶಿಸುತ್ತಿರಬೇಕಾದರೆ, ನೀವು .... ;-)

(ನಮ್ಮಂತಹ ಬ್ರಹ್ಮಚಾರಿಗಳು ಇದನ್ನು ಮೀರಿ ಯೋಚಿಸಲಾರೆವು.)

she-pu (ಶೇಪು)|Srinivas PS(ಶ್ರೀನಿವಾಸ್ ಪ.ಶೇ) said...

ರಾಜೀವ,
ಮೌನದ ಮುಖಗಳು ಹಲವು.
ಜೋಡಿ ಹಕ್ಕಿಯನ್ನು ಮೊದಲು ಹುಡುಕಿಕೊಳ್ಳಿ...
ಅದು ಹಾಡದಿದ್ದಾಗಾಗುವ ನೋವು ತಿಳಿಯುವುದು :)