Sunday, July 19, 2009

ನಡೆಸು ಎನ್ನ ಬಿಡದೆ

ನಡೆಸು ಎನ್ನ ಬಿಡದೆ ಹಿಡಿದು
ಎಡವಿ ಬೀಳೋ ಹುಡುಗೆನದು
ತೊಡರಿ ತಡಕುವಾಗ
ತಡವಿ ಬಿಡಿಸೋ ಒಡೆಯ (ಬಿಡಿಸೆನ್ನೊಡೆಯ)

ಕೇಡನರಿಯದೆ ಮಾಡೆ
ಬಡಿದು ಸರಿಪಡಿಸೆನ್ನ
ಕೋಡ ಮೂಡದ ಹಾಗೆ
ನೋಡೆಕೊಳೊ ಹಡೆದವನೆ

ಕಡಲಿರಲಿ, ಸುಡುತಿರಲಿ
ಒಡಕಿರಲಿ, ಮಡುವಿರಲಿ,
ಅಡಿಗಡಿಗೂ ಹಿಡಿದೆನ್ನ
ದಿಟದ ಜಾಡಲಿ ಇರಿಸು

ಈ ಹಾಡನ್ನು ಹಮೀರ್ ಕಲ್ಯಾಣಿ ರಾಗಕ್ಕೆ ಅಳವಡಿಸಿದ್ದೇನೆ. ಈ ರಾಗವನ್ನು ಕೇದಾರ್ ಎಂದು ಹಿಂದೂಸ್ಥಾನಿ ಪದ್ದತಿಯಲ್ಲಿ ಹೇಳುತ್ತಾರೆ.
ಶಾಸ್ತ್ರೀಯವಾಗಿ ಹೆಚ್ಚಾಗಿ ಕಲಿತಿಲ್ಲವಾದ್ದರಿಂದ, ತಪ್ಪುಗಳಿದ್ದರೆ ಮನ್ನಿಸಿ.

ನಡೆಸು ಎನ್ನ ಬಿಡದೆ.m...


ಪ್ರಖ್ಯಾತ ಹಾಡು ’ ಹಮ್ ಕೊ ಮನ್ ಕಿ ಶಕ್ತಿ ದೇನಾ’, ಇದೇ ರಾಗದಲ್ಲಿದೆ.

--ಶ್ರೀ

4 comments:

Shobha said...

good job sri :)

she-pu (ಶೇಪು)|Srinivas PS(ಶ್ರೀನಿವಾಸ್ ಪ.ಶೇ) said...

Thanks Shobha!

hariharapurasridhar said...

ಶ್ರೀನಿವಾಸ್,
ನಿಮ್ಮ ಪದ್ಯವನ್ನು ಗುರುನಮನವಾಗಿ
ಮಾರ್ಪಡಿಸಿಕೊಂಡು ಮನಸ್ಸಿಗೆ ಹಿತವಾಗುವಂತೆ ನನ್ನ ನಾದಿನಿಯಿಂದ ಹಾಡಿಸಿ ಆನಂದಿಸಿರುವೆ. ನಿಮ್ಮ ಮೇಲ್ ಐ.ಡಿ ದಯಮಾಡಿ ಕಳಿಸಿಕೊಡಿ. ನಿಮ್ಮದೇ ಹಾಡನ್ನು ನನ್ನ ನಾದಿನಿ ಹಾಡಿದ್ದಾಳೆ. ಅದರ ಆಡಿಯೋ ಫೈಲ್ ಕಳಿಸಿಕೊಡುವೆ.ನಿಮಗೆ ಒಪ್ಪಿಗೆ ಯಾದರೆ ಅದನ್ನು ಬ್ಲಾಗಿಗೆ ಅಪ್ ಲೋಡ್ ಮಾಡುವಿರಂತೆ.

ನಡೆಸೆನ್ನ ಕೈ ಪಿಡಿದು
ಎಡವಿ ಬೀಳುತಿಹೆ ನಾನು
ತೊಡರಿ ತಡಕುವಾಗ
ತಡವಿ ಬಿಡಿಸೋ ಗುರುವೇ||

ಕೇಡನರಿಯದೆ ಮಾಡ್ವೆ
ಹಿಡಿದು ಸರಿಪಡಿಸೆನ್ನ
ಕೋಡ ಮೂಡದ ಹಾಗೆ
ನೋಡುತಿರು ಗುರುವೇ||

ಕಡಲಿರಲಿ, ಸುಡುತಿರಲಿ
ಒಡಕಿರಲಿ, ಮಡುವಿರಲಿ,
ಅಡಿಗಡಿಗೂ ಹಿಡಿದೆನ್ನ
ದಿಟದ ಜಾಡಲಿ ನಡೆಸು||

ನಿನ್ನ ಪದತಲದಲ್ಲಿ
ನಾನೆಂದೋ ಶರಣಾದೆ
ಮನ್ನಿಸುತ ತಪ್ಪುಗಳ
ಪೊರೆಯೊ ಎನ್ನಯ ಗುರುವೆ||
ನಿಮ್ಮ
ಶ್ರೀಧರ್
hariharapurasridhar2009@gmail.com

Me, Myself & I said...

ಶ್ರೀ ,
ನಿನ್ನೆ ರಾತ್ರಿ ಈ ಪದ್ಯವನ್ನ ಕೇಳಿದೆ... ಸಂಪದದ ಸಹಾಯದಿಂದ.
ತುಂಬಾ ಚೆನ್ನಾಗಿ ಬರೆದಿದ್ದೆರ, ಧನ್ಯವಾದಗಳು.
ನಿಮ್ಮ ಈ ಬ್ಲಾಗ್ ನೋಡಬೇಕೆಂದರೆ ನಾನು ಇದನ್ನ bookmark ಮಾಡಿಕೊಳ್ಳ ಬೇಕೇ?
ಅಥವಾ, ನನ್ನ ಬ್ಲಾಗ್ ನಿಂದ ನೇರವಾಗಿ ನಿಮ್ಮ ಬ್ಲಾಗ್ ಗೆ ಒಂದು ಭೇಟಿ ಕೊಡಲು ಸಾದ್ಯವಿಹುದಲ್ಲವೇ?
"Followers" ಅಂತ gadget ನಿಮ್ಮ ಬ್ಲಾಗ್ಗೆ ಸೇರಿಸಿಕೊಳ್ಳ ಬಹುದೇನೋ.


ಶ್ರೀದರ್,
ನಿಮ್ಮ ಕಾಳಜಿಗೂ ಧನ್ಯವಾದಗಳು.