ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಕೃಷ್ಣಾ'....
ಥಟ್ಟನೆ ಬಿತ್ತು ಕೆನ್ನೆಗೆ ಏಟು...
'ಕೃಷ್ಣನನ್ನೇಕೆ ಕರೆಯುವೆ,
ನಾನು ಅರ್ಜುನ!' :)
~~~ * ~~~
ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಅರ್ಜುನಾ...'
ಅರ್ಜುನ ಬರಲಿಲ್ಲ...
ಥಟ್ಟನೆ ಬೀಸಿ ಕೆನ್ನೆಗೆ ಏಟು,
ಕೂಗಿದಳು 'ಕೃಷ್ಣಾ...' :)
--ಶ್ರೀ
(೨೭-ನವಂಬರ್-೨೦೦೮)
4 comments:
ನಮ್ಮ ಪವಿತ್ರ ಗ್ರಂಥವಾದ ಮಹಾಭಾರತದಲ್ಲಿನ ಸಂದರ್ಭಗಳನ್ನು ಹಿಂದೂಗಳಾದ ನಾವೇ ಹೀಗೆ ವ್ಯಂಗ್ಯವಾಗಿ ಬರೆಯಬಹುದೇ???
ಒಮ್ಮೆ ಯೋಚಿಸಿ ನೋಡಿ...
ಈ ಘಟನೆ ನಿಜವಾಗಿರಲು ಸಾಧ್ಯವಿಲ್ಲವೇ?
ದುಶ್ಶಾಸನನು ಸೀರೆಯನು ಸೆಳೆದಾಗ ಶಂಡರಂತೆ ಪಾಂಡವರು ತಲೆ ತಗ್ಗಿಸಿ ಕುಳಿತಿದ್ದಾಗ, ದ್ರೌಪದಿಯ ಮನಸ್ಥಿತಿ ಹೇಗಿರಬಹುದು...
ಮುಂದೆ, ಅರ್ಜುನ ಸರಸಕ್ಕೆ ಬಂದಾಗ, ಹಿಂದೆ ತನ್ನ ಜೀವನದಲ್ಲಿ ನಡೆದ ಕರಾಳ ಘಟನೆಯಿಂದ ಬೆಚ್ಚಿ, ’ಕೃಷ್ಣಾ’ ಎಂದಿರಲಾರಳೇ???
ಏನಂತೀರಿ ಹೇಳಿ...
ನಿಮ್ಮ ಜೊತೆ ಮಾತಾಡೋದು ವೇಸ್ಟ್. ನಿಮ್ಮ ಮಾತು ಕೇಳಿ, ನೀವು ಖಂಡಿತ ಹಿಂದೂ ಅಲ್ಲ ಅಂತ ಸಂದೇಹ ಬಂತು... ಯಾಕೆಂದ್ರೆ ಮಹಾಭಾರತ ಓದಿದ್ರೆ ಈ ತರಹ ಪಾಂಡವರು ಷಂಡರು ಅಂತ ಹೇಳಲು ಸಾಧ್ಯವೇ ಇಲ್ಲ. ಆಮೇಲೆ ನಿಮ್ಮ ಬ್ಲಾಗಲ್ಲಿ ಶಿವ ಪಾರ್ವತಿ ಚಿತ್ರ ನೋಡಿ ಹಿಂದೂ ಇರಬಹುದು ಅಂತ ಅನಿಸ್ತು. ಒಳ್ಳೇದಾಯ್ತು, ಹೆಚ್ಚಿಸ್ಕೊಳ್ಳಿ.....
:)
ಒಮ್ಮೆ ದ್ರೌಪದಿಯ ಸ್ಥಾನದಲ್ಲಿ ನಿಲ್ಲಿ ಸಾಕು...
ನನಗೆ ಮಿಕ್ಕವಕ್ಕೆ ಉತ್ತರಿಸುವ ಅವಶ್ಯಕತೆ ಇಲ್ಲಿ ಇಲ್ಲ ಅನಿಸುತ್ತದೆ...
Post a Comment