Monday, November 25, 2013

ಅಸಡ್ಡೆ

ಚೆಲುವಿನ ಬಗ್ಗೆ ನಮಗೆ
ಒಂದು ರೀತಿಯ ಹುಚ್ಚು
ಇಲ್ಲವೋ ಬಹಳ ಅಸಡ್ಡೆ

ಬಿದಿಗೆ-ಹುಣ್ಣಿಮೆಯಲ್ಲದ
ಆ ಚಂದಿರನೂ
ಬರೀ ಬಿಳಿಯ ಗುಡ್ಡೆ

Friday, November 22, 2013

ಚಳಿಗಾಲ

ವರುಷದುದ್ದಕ್ಕೂ
ಹಸಿರು, ಕೆಂಪು,
ಹಳದಿ ಬಣ್ಣಗಳ
ಧರಿಸಿ ಮೆರೆದವರು
ಬೆತ್ತಲಾಗುವ ಕಾಲ!

ಸದ್ದಿಲ್ಲದೇ
ಕೆಲಸ ಮಾಡುವ
ಕೈಗಳೂ
ಕುಳಿರ್ಗಾಳಿಯ ಶ್ರುತಿಗೆ
ರಾಗವಾಗುವ ಕಾಲ!

Tuesday, November 12, 2013

ರಂಗವಲ್ಲಿ

ಇನಿಯಾ.
ನಿನಗಾಗಿ
ಬರೆದ
ಈ ಕವನ
ಅಕ್ಷರದ ಗುಡ್ಡೆಯಲ್ಲ
ಪದಗಳ ರಾಶಿಯಲ್ಲ
ಒಲವಿನಿಂದ ಬಿಡಿಸಿದ
ರಂಗವಲ್ಲಿ...

Monday, November 4, 2013

ಆ ರಾತ್ರಿ...(ಸಣ್ಣ ಕಥೆ)

ಆ ರಾತ್ರಿ...(ಸಣ್ಣ ಕಥೆ)
---------
"ಬೇಡಾ ಅಂದ್ರೆ ಬೇಡ!!! ಅಲ್ಲೇ ಇರು ಪರವಾಗಿಲ್ಲ...ನಾಳೆ ಬೆಳಗ್ಗೆ ಎದ್ದು ಬಾ!"
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿನಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೋ ಹೋಗು" ಎಂದು ಕೋಪದಲ್ಲಿ ಫೊನ್ ಕುಕ್ಕಿದರು ಅಮ್ಮ.

"ಯಾಕಮ್ಮ ಯೋಚನೆ ಮಾಡ್ತೀಯ???...ಹೀಗೆ ರಾಗಿಣಿ ಎಷ್ಟೋ ಸರತಿ ರಾತ್ರಿ ಆಫೀಸಿಂದ ಬರಲ್ವಾ?" ಎಂದು ಹತ್ತೊಂಬತ್ತು ವರ್ಷದ ರಾಜ ಹೇಳಿದ ಮಾತು ಅಮ್ಮನ ಕಿವಿಗೆ ಬೀಳಲಿಲ್ಲ.
ಇಂದು ಅಮ್ಮನ ಮನಸ್ಸು ಯಾಕೊ ಸರಿ ಇರಲಿಲ್ಲ. ಎಷ್ಟೊ ಸರತಿ ರಾಗಿಣಿ ಆಫೀಸಿನಿಂದ ಮಧ್ಯ ರಾತ್ರಿ ಬಂದದ್ದುಂಟು, ಆದರೂ ಅಮ್ಮನಿಗೆ ಇಂದು ಯಾಕೋ ಆತಂಕವಾಗಿತ್ತು. ಮನಸ್ಸಲ್ಲೇ ಕೊರಗುತ್ತ ಅಮ್ಮ "ಇವರಿಗೇನು ಗೊತ್ತಾಗತ್ತೆ...ಹುಡುಗ್ ಬುದ್ದಿ! ಕಾಲ ಸರಿ ಇಲ್ಲ...ದೇವರು ಇವರಿಗೆ ಯಾವಾಗ ಬುದ್ಧಿ ಕೊಡ್ತಾನೋ???" ಎಂದು ಒದರಿಕೊಂಡರು.

***
(ಸಮಯ - ನಡು ರಾತ್ರಿ 2.30)

ರಸ್ತೆಯ ಬದಿಯಲ್ಲಿ ಕೆಟ್ಟು ನಿಂತ ಇಂಡಿಕಾ ಕ್ಯಾಬಿನೊಳಗೆ ರಾಗಿಣಿ ಒಬ್ಬಳೇ ಕುಳಿತಿದ್ದಾಳೆ! ಗ್ಯಾಸ್ ಮುಗಿದಿದೆ ಎಂದು ಡ್ರೈವರ್ ಕೆಳಗೆ ಇಳಿದಿದ್ದ.
ಆಫೀಸಿನಿಂದ ಹೊರಟಿದ್ದ ರಾಗಿಣಿ, ಕಾರಿನ ಕಿಟಕಿಯಿಂದಾಚೆಗೆ ತಲೆ ಹಾಕಿ, ಸುತ್ತಲೂ ಕಣ್ಣು ಹಾಯಿಸಿದಳು, ಎಂದೂ ಇಲ್ಲದ್ದು, ಇಂದು ಕೆಂಪೇಗೌಡ ರಸ್ತೆಯಲ್ಲಿ ಕೂಡ ಯಾರೂ ಕಾಣುತ್ತಿಲ್ಲ..,!
ತಳಮಳದಿಂದ ಕೂಡಿದ ರಾಗಿಣಿಯ ಮನಸ್ಸಿನಲ್ಲಿ ಹಲವಾರು ಯೋಚನೆಗಳು ಮೂಡ ತೊಡಗಿದವು.
"ಛೇ! ಅಮ್ಮನ ಮಾತು ಕೇಳಬೇಕಿತ್ತು! ಇವತ್ತು ಯಾಕೋ ಅಮ್ಮ ಸ್ವಲ್ಪ ಜಾಸ್ತಿನೇ ಗಲಾಟೆ ಮಾಡಿದ್ರು. ಆಫೀಸ್ನಿಂದ ಸ್ವಲ್ಪ ಬೇಗ ಹೊರಡಬೇಕಿತ್ತು. ಇಲ್ಲ, ಅಮ್ಮ ಹೇಳಿದ್ ಹಾಗೆ ಬೆಳಗ್ಗೆ ಎದ್ದು ಮನೆಗೆ ಹೋಗಬೇಕಿತ್ತು! ಎಲ್ಲಿ ಬಂದು ಸಿಕ್ಕಿ ಹಾಕಿ ಕೊಂಡಿದ್ದೀನಿ ನಾನು!"

ರಾಗಿಣಿ ಮತ್ತೊಮ್ಮೆ ಯಾರಾದರೂ ಕಾಣುವರೋ ಎಂದು ಸುತ್ತ-ಮುತ್ತಲೂ ನೋಡಿದಳು. ಯಾರೂ ಕಣ್ಣಿಗೆ ಬೀಳಲಿಲ್ಲ. ಆಕಾಶ ಕಾಣದಂತೆ ಎತ್ತರಕ್ಕೆ ಹರಡಿಕೊಂಡಿರುವ ಗುಲ್ ಮೋಹರ್ ಮರಗಳು. ಉದ್ದಕ್ಕೂ ಕಾಣುತ್ತಿರುವ ಲೈಟ್ ಕಂಬಗಳ ಸಾಲು. ಬಲಕ್ಕೆ ಯಾವುದೋ ಸರ್ಕಾರಿ ಕಚೇರಿಯಿರಬೇಕು, ರಸ್ತೆಯ ಎಡಕ್ಕೆ ಪಕ್ಕದ ಸರ್ಕಾರಿ ಶಾಲೆಗೆ ಹೊಂದಿಕೊಂಡಿರುವ ದೊಡ್ಡ ಮೈದಾನ. ಬೆಳಗಾದರೆ ಗಿಜಿಗುಡುವ ಜಾಗ. ಆದರೆ ಇದು ಮಧ್ಯ ರಾತ್ರಿ, ಹಾಗಾಗಿ ಒಂದು ನರಪಿಳ್ಳೆಯ ಸದ್ದೂ ಇಲ್ಲ!

"ಛೇ! ಗಾಡಿ ಇಲ್ಲೇ ಕೆಡಬೇಕಾ?" ಎಂದು ಮನಸ್ಸಿನಲ್ಲೇ ಶಪಿಸಿದಳು ರಾಗಿಣಿ. ರಾಗಿಣಿ ಆ ರೀತಿ ಶಪಿಸಲು ಕಾರಣವಿತ್ತು. ಹೇಳಿ-ಕೇಳಿ ಅದು ಕಾರ್ಪೊರೇಶನ್ ಜಾಗ! ಮಧ್ಯ ರಾತ್ರಿಯಾದರೂ ಕೆಂಪೇಗೌಡ ರಸ್ತೆ ನಿರ್ಜನ ಪ್ರದೇಶ ಅನ್ನುವದಕ್ಕೆ ಆಗುವುದೇ ಇಲ್ಲ. ಯಾರಾದರೂ ಓಡಾಡುತ್ತಲೇ ಇರುತ್ತಾರೆ. ಆದರೆ ಕ್ಯಾಬ್ ಕೆಟ್ಟ ಜಾಗದಲ್ಲಿ ಯಾರೂ ಕಾಣುತ್ತಿರಲಿಲ್ಲ! ಇನ್ನೂ ಒಂದು ಫ಼ರ್ಲಾಂಗ್ ಮುಂಚೆಯಾಗಿದ್ದರೆ, ಅಲಸೂರು ಗೇಟ್ ಪೋಲೀಸ್ ಸ್ಟೇಶನ್ ಇದೆ! ಇನ್ನೆರಡು ಫ಼ರ್ಲಾಂಗ್ ಮುಂದಕ್ಕೆ ಮೈಸೂರು ಬ್ಯಾಂಕ್! ಅಲ್ಲಿ ಸಾಮಾನ್ಯವಾಗಿ ಹೆಚ್ಚು ಜನರಿರುತ್ತಾರೆ. ಇವೆರಡರ ಮಧ್ಯೆ ವಿಶಾಲ ರಸ್ತೆಯಲ್ಲಿ ಕಾರು ಕೆಟ್ಟು ನಿಂತಿದೆ!

ರಾಗಿಣಿ, ಅಂದಿನ ದಿನದ ಬಗ್ಗೆ ಮೆಲಕು ಹಾಕ ತೊಡಗಿದಳು. ರಾಗಿಣಿಗೆ ಅಂದಿನ ದಿನವೇ ಕೆಟ್ಟದಾಗಿತ್ತು. ಬೆಳಗ್ಗೆಯಿಂದ ಪ್ರಾಜೆಕ್ಟ್ ಗಾಗಿ ಮಾಡಿದ ಕೆಲಸವೆಲ್ಲಾ ತಪ್ಪಾಗಿತ್ತು. ಇದನ್ನು ತಿಳಿದ ಮಾನೇಜರ್ ಹರಿಹಾಯ್ದಿದ್ದ. ಮಾರನೆಯ ದಿನ, ಕ್ಲೈಂಟ್'ಗೆ ಡೆಮೋ ತೋರಿಸಲೇಬೇಕು ಎಂದು ರಾಗಿಣಿಯ ತಲೆ ಮೇಲೆ ಕೂತಿದ್ದ. ಪಾಪ, ರಾಗಿಣಿ! ತಪ್ಪನ್ನೆಲ್ಲ ಸರಿ ಪಡಿಸಲು ಆಫೀಸಿನಲ್ಲಿ ಕುಳಿತಿದ್ದಳು! ಕೆಲಸವೆಲ್ಲಾ ಮುಗಿಸಿ ಮನೆಗೆ ಹೊರಡಲು ಕ್ಯಾಬ್ ಬಾಗಿಲು ತೆರೆದಾಗ "ಬನ್ನಿ ಮೇಡಮ್!" ಎಂದು ಎಂದಿಗಿಂತ ಹೆಚ್ಚಿನ ಅಕ್ಕರೆಯಿಂದ ಕರೆದಿದ್ದ ಆ ಕ್ಯಾಬ್ ಡ್ರೈವರ್. ಆ ಕ್ಯಾಬ್ ಡ್ರೈವರ್ ’ಕರಿಯ’ನನ್ನು ಕಂಡರೆ ರಾಗಿಣಿಗೆ ಆಗದು. ಅವನ ಕರಿಯ ಮೂತಿ, ಗಡಸು ಧ್ವನಿ, ದಪ್ಪ ಮೀಸೆ, ಓಮ್ ಪುರಿ ಕೆನ್ನೆ ಯಾವುದೂ ಹಿಡಿಸುವುದಿಲ್ಲ. "ಥಥ್! ಇಂದು ಇವನೇ ಬರಬೇಕೆ!" ಎನ್ನುತ್ತಾ ಕಾರಿನಲ್ಲಿ ಕುಳಿತಿದ್ದಳು ರಾಗಿಣಿ. ದಾರಿಯಲ್ಲಿ ಬರುವಾಗ ಕಾರ್ಪೊರೇಶನ್ ಬಳಿ ಕಾರಿನ ಗ್ಯಾಸ್ ಖಾಲಿ ಆಗಿದೆ.
ಕಾರಿನ ಕಿಟಕಿಯ ಬಳಿ ಬಂದು "ಮೇಡಮ್!" ಎಂದು ಡ್ರೈವರ್ ಮೆಲ್ಲನೆ ಹೇಳಿದರೂ, ಆ ಗಡುಸು ಧ್ವನಿಗೆ ಬೆದರಿದಳು ರಾಗಿಣಿ. ಡ್ರೈವರ್ ರಾಗಿಣಿ ಕೊಂಚ ಬೆದರಿದ್ದನ್ನೂ ನೋಡಿಯೂ ಮುಂದುವರಿಸಿದ, "ನಮ್ಮ ಕಂಪನೀದೇ ಇನ್ನೊಂದ್ ಕ್ಯಾಬಿದೆ. ಈ ಕಡೇನೇ ಹೋಗ್ತಾ ಇದೆಯಂತೆ. ಒಂದ್ ಐದು ನಿಮಿಷ ಅಷ್ಟೇ! ಸಿಲಿಂಡರ್ ಬರತ್ತೆ! ಪ್ಲೀಸ್ ವೈಟ್ ಮಾಡಿ".

ಡ್ರೈವರ್ ಐದು ನಿಮಿಷ ಎಂದು ಹೇಳಿ, ಸುಮಾರು ಹದಿನೈದು ನಿಮಿಷಕ್ಕೂ ಮೇಲಾಗಿತ್ತು. ಅಮ್ಮನ ಬೈಗುಳ ಮತ್ತೊಮ್ಮೆ ಜ್ಞಾಪಕಕ್ಕೆ ಬಂತು. ರಾಗಿಣಿಗೆ ಆತಂಕ ಹೆಚ್ಚಾಗ ತೊಡಗಿತು
ಕಾರಿನಿಂದ ಕೆಳಗಿಳಿದ ಡ್ರೈವರ್ ಯಾರಿಗೋ ಮತ್ತೊಮ್ಮೆ ಫೋನ್ ಮಾಡುತ್ತಿರುವುದನ್ನು ಗಮನಿಸಿದಳು. ಅವನು ಮಾತಾಡುವುದು ಏನೂ ಅರ್ಥವಾಗುತ್ತಿಲ್ಲ! ಬಹುಷ: ತುಳುವೋ ಕೊಂಕಣಿಯೋ ಇರಬೇಕು. ಆ ಕಡೆಯವನ ಜೊತೆ ನಗುನಗುತ್ತಾ ಮಾತಾಡುತ್ತಿದ್ದ. ಈ ರೀತಿ ನಗುತ್ತಾ ಮಾತನಾಡುತ್ತಿದ್ದವನನ್ನು, ತಲೆ ತಿರುಗಿಸಿ ದಿಟ್ಟಿಸಿ ನೋಡುತ್ತಿದ್ದ ರಾಗಿಣಿಯನ್ನು, ಡ್ರೈವರ್ ಒಂದೆರಡು ಬಾರಿ ನೋಡಿದ್ದು ಇವಳಿಗೆ ಇರಿಸು-ಮುರಿಸೆನಿಸಿತು. ತಲೆಯನ್ನು ಮತ್ತೆ ನೇರವಾಗಿ ಇಟ್ಟುಕೊಂಡರೂ, ಕಣ್ಣಂಚಿನಲ್ಲೇ ಕರಿಯನನ್ನು ಗಮನಿಸತೊಡಗಿದಳು.
"ಗ್ಯಾಸ್ ಸಿಲಿಂಡರ್ ಖಾಲಿ ಆದ್ರೆ ನಗೋದು ಏನಿದೆ!!???" ಎಂದು ಮನಸ್ಸಲ್ಲೇ ಕರಿಯನನ್ನು ಬಯ್ದುಕೊಂಡಳು ರಾಗಿಣಿ.

ಎರಡು ದಿನದ ಹಿಂದೆಯಷ್ಟೇ ಪ್ರತಿಭಾ ಎಂಬ ಕಾಲ್ ಸೆಂಟರ್ ಹುಡುಗಿಯ ಅತ್ಯಾಚಾರದ ಪ್ರಕರಣ ನಡೆದಿತ್ತು! ಎಂದೂ ಭಯಪಡದ ರಾಗಿಣಿಯ ಮನಸ್ಸಿನಲ್ಲೂ, ಆ ಕೆಟ್ಟ ಯೋಚನೆ ಹಾಯದಿರಲಿಲ್ಲ. ಮತ್ತೊಮ್ಮೆ ಡ್ರೈವರ್ ಕಡೆಗೆ ನೋಡಿದಳು. ಫೋನ್ ನಲ್ಲಿನ ಮಾತು ಮುಗಿಸಿದ ಅವನು ಮತ್ತೊಮ್ಮೆ ನಗುತ್ತಾ "ಇನ್ನೇನ್ ಬರತ್ತೆ ಮೇಡಮ್!". ಅವನ ಆ ನಗೆ ರಾಗಿಣಿಗೆ ಹಿಡಿಸದು!
"ಕಾರಿನಲ್ಲಿ ಇನ್ನೊಂದು ಸಿಲಿಂಡರ್ ಇದ್ದಂತಿತ್ತು...ಈ ಕರಿಯ ಸುಳ್ಳು ಹೇಳುತ್ತಿದ್ದಾನಾ? ಯಾರಿಗೋ ಫೋನ್ ಮಾಡಿ ನಗ್ ನಗ್ತಾ ಮಾತಾಡ್ತಿದ್ದ! ಈಗಲೂ ಇವನ ಮುಖದಲ್ಲಿ ಅದೇಕೆ ಅಷ್ಟೊಂದು ವಿಚಿತ್ರ ರೀತಿಯ ನಗು! ಈಡಿಯಟ್ ಫೆಲ್ಲೋ!" ಎಂದು ಕರಿಯನನ್ನು ಮನಸ್ಸಿನಲ್ಲೇ ಬಯ್ದುಕೊಳ್ಳತೊಡಗಿದಳು. ಪ್ರತಿಭಾ ಅತ್ಯಾಚಾರದ ಬಗ್ಗೆ ಯೋಚಿಸುತ್ತಿದ್ದ ರಾಗಿಣಿಗೆ ಇನ್ನಷ್ಟು ದಿಗಿಲಾಗ ತೊಡಗಿತು. ರಾಜ, ಆ ಪ್ರಕರಣವಾದ ಮಾರನೇ ದಿನವೇ ಹೇಳಿದ್ದ. ಖಾರದ ಪುಡಿಯನ್ನಾದರೂ ಪರ್ಸ್'ನಲ್ಲಿ ಇಟ್ಟುಕೋ ಎಂದು. ಆದರೆ ಖಾರದ ಪುಡಿಯನ್ನೂ ಇಟ್ಟುಕೊಂಡಿಲ್ಲವಲ್ಲ ಎಂದು ಚಡಪಡಿಸಿದಳು! "ಇವತ್ತು ಪಾರಾದರೆ ನಾಳೆಯಿಂದ ತಪ್ಪದೇ ಇಡಬೇಕು...ಮಧ್ಯರಾತ್ರಿ ಕ್ಯಾಬ್ ನಲ್ಲಿ ಬರಲೇ ಬಾರದು" ಎಂದು ಮನಸ್ಸಿನಲ್ಲೇ ನಿರ್ಧರಿಸಿಕೊಂಡಳು ರಾಗಿಣಿ. ರಾಗಿಣಿಯ ಕರ್ಮಕ್ಕೆ ಮೊಬೈಲ್ ಬ್ಯಾಟರಿ ಬೇರೆ ಮುಗಿದಿತ್ತು, ತಮ್ಮನಿಗೆ ಫೋನ್ ಮಾಡಿ ಗಾಡಿಯಲ್ಲಿ ಬರಹೇಳಲೂ ಆಗುವುದಿಲ್ಲ! ಯಾವಾಗಲೂ ರಾಗಿಣಿ ಸಮಯಕ್ಕೆ ಸರಿಯಾಗಿ ಬ್ಯಾಟರಿ ಚಾರ್ಜ್ ಮಾಡುವುದಿಲ್ಲವೆಂದು ಬಯ್ಸಿಕೊಳ್ಳುವವಳೇ! ಇಂದು ಈ ರೀತಿ ಕೈ ಕೊಟ್ಟಿತ್ತು! ಈ ಜಾಗದಲ್ಲಿ ಸುತ್ತಲೂ ಒಂದು ಕಾಯಿನ್ ಬೂತ್ ಕೂಡ ಇಲ್ಲ!
ಸಹಾಯಕ್ಕೆ ಯಾರಾದರೂ ಸಿಗಬಹುದೇನೋ ಎಂದು ಮತ್ತೊಮ್ಮೆ ಸುತ್ತ ನೋಡಿದಳು ರಾಗಿಣಿ. ಆಗೊಂದು-ಈಗೊಂದು ಎಂಬಂತೆ ಕಾರುಗಳು ಭರ್ರೆಂದು 70ಕ್ಕಿಂತ ಹೆಚ್ಚಿನ ಸ್ಪೀಡಿನಲ್ಲಿ ಹೋಗುತ್ತಿದ್ದದನ್ನು ಬಿಟ್ಟು ನಡೆದಾಡುವವರು ಯಾರೂ ಕಾಣಲಿಲ್ಲ. ಸುಮಾರು ದೂರದಲ್ಲಿ ಮೈದಾನದ ಕಟ್ಟೆಯ ಮೇಲೆ, ಯಾರೋ ಮುಸುಕು ಹೊದ್ದು ಮಲಗಿದ್ದಂತೆ ಕಂಡು ಬಂತು. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅವರನ್ನು ಸಹಾಯಕ್ಕೆ ಕರೆಯಬಹುದೇ ಎಂಬ ಯೋಚನೆ ರಾಗಿಣಿಯ ಮನಸಲ್ಲಿ ಹರಿಯಿತು. ಅಲ್ಲಿಯೇ ಮಲಗಿದ್ದ ಮನುಷ್ಯನನ್ನೇ ದಿಟ್ಟಿಸಿ ನೋಡುತ್ತಿದ್ದ ಕ್ಷಣದಲ್ಲಿ ಕಟ್ಟೆಯ ಮೇಲಿಂದ ಒಂದು ನಾಯಿ ಛಂಗನೆ ಎಗರಿತು. ಇದನ್ನು ನಿರೀಕ್ಷಿಸದಿದ್ದ ರಾಗಿಣಿ ಥರಗುಟ್ಟಿದಳು! ಸಮಯ ಕಳೆಯುತ್ತಿದ್ದಂತೆ, ರಾಗಿಣಿಗೆ ಭಯ ಹೆಚ್ಚಾಗ ತೊಡಗಿತು.

ಮತ್ತೊಂದು ಇಂಡಿಕಾ ಕ್ಯಾಬ್ ಬಂದು ರಾಗಿಣಿಯಿದ್ದ ಕಾರಿನ ಪಕ್ಕ ನಿಂತಿತು. ಆ ಡ್ರೈವರ್ ಇಳಿದು ಬಂದು ಕರಿಯನ ಕೈ ಕುಲಕಿ ಮತ್ತೆ ಅರ್ಥವಾಗದ ಭಾಷೆಯಲ್ಲಿ ಮಾತಾಡ ತೊಡಗಿದ! ಇಬ್ಬರೂ ಮತ್ತೆ ಮತ್ತೆ ನಗುತ್ತಿದ್ದಾರೆ...! ಹಾಗೇ ಮಾತನಾಡುತ್ತಾ ಆ ಡ್ರೈವರ್, ಅವನ ಕಾರಿನ ಸಿಲಿಂಡರ್ ತೆಗೆದು ಕರಿಯನ ಕಾರಿನಲ್ಲಿ ಅಳವಡಿಸಲು ಸಹಾಯ ಮಾಡಿದ. "ಹೊರಡೋಣ ಮೇಡಮ್! ಆಗ್ಲೆ ತುಂಬಾ ಲೇಟ್ ಆಗಿದೆ" ಎನ್ನುತ್ತಾ ಕಾರ್ ಶುರು ಮಾಡಿದ.

ಇಂಡಿಕಾ ಕ್ಯಾಬ್ ಹೊರಟಿತು. ಇನ್ನೇನು ಮೈಸೂರ್ ಬ್ಯಾಂಕ್ ದಾಟಿರಬಹುದು. ಮತ್ತೊಮ್ಮೆ ಡ್ರೈವರ್ ಕಾರನ್ನು ಪಕ್ಕಕ್ಕೆ ನಿಲ್ಲಿಸಿದ!
ರಾಗಿಣಿ ಆತಂಕದಿಂದ "ಮತ್ತೆ ಏನಾಯ್ತು???" ಎಂದು ಕೇಳಿದಳು.
"ಥೂ! ಕ್ಲಚ್ ವೈರ್ ಕಟ್ ಆಯ್ತು ಅಂತ ಕಾಣತ್ತೆ ಮೇಡಂ. ಯಾಕೊ ಟೈಮ್ ಸರಿ ಇಲ್ಲ. ಒಂದು ನಿಮಿಷ ಇರಿ" ಎಂದು ಮತ್ತೆ ಕರೆ ಮಾಡಿದ, ಮತ್ತದೇ ಭಾಷೆ! ಹೆಚ್ಚು ದೂರ ಹೋಗಿರಲಿಲ್ಲವಾದ್ದರಿಂದ, ಇನ್ನೊಬ್ಬ ಡ್ರೈವರ್ ಎರಡೇ ನಿಮಿಷದಲ್ಲಿ ಬಂದ. "ಮೇಡಮ್! ಒಂದು ಕೆಲಸ ಮಾಡೋಣ. ನಾವು ನನ್ ಫ್ರೆಂಡ್ ಕಾರಲ್ಲೇ, ನಿಮ್ಮನ್ನ ಮನೆಗೆ ಡ್ರಾಪ್ ಮಾಡಿ, ವಾಪಸ್ ಬಂದು ನನ್ನ ಕಾರ್ ರಿಪೇರಿ ಮಾಡ್ತೀವಿ - ಸರಿಯಾ" ಎಂದ.
ಇದನ್ನು ಕೇಳುತ್ತಿದ್ದಂತೆ ರಾಗಿಣಿಯ ಮೈ ತುಸು ಕಂಪಿಸಿತು! ಏನು ಮಾಡುವುದು ಎಂದು ತಿಳಿಯಲಿಲ್ಲ. ಬೇರೆ ದಾರಿ ತೋಚಲಿಲ್ಲ. ಒಂದು ಕಡೆ ಭಯ. ಇನ್ನೊಂದು ಕಡೆ ಏನು ಆಗುವುದಿಲ್ಲ ಎಂಬ ಮೊಂಡು ಧೈರ್ಯ. "ಆಗಲಿ ಏನಾಗುವುದೋ ನೋಡೇ ಬಿಡೋಣ! ಶ್ರೀಕೃಷ್ಣ ನನ್ನನ್ನು ಎಂದೂ ಕೈ ಬಿಡುವಿದಿಲ್ಲ. ನನ್ನನ್ನು ಕಾಯುತ್ತಾನೆ" ಎಂದು ದೇವರನ್ನು ಮನದಲ್ಲೇ ನೆನೆದು ಹೊರಟಳು.

ಮತ್ತೊಂದು ಕ್ಯಾಬ್'ನಲ್ಲಿ ಅವರಿಬ್ಬರು ಮತ್ತು ರಾಗಿಣಿ. ಏನಾಗುವುದೋ ಎಂಬ ಹಿಂಜರಿಕೆಯಲ್ಲೇ ಹಿಂದಿನ ಸೀಟಿನಲ್ಲಿ ಕುಳಿತಳು ರಾಗಿಣಿ! ಅವರಿಬ್ಬರೂ ಮುಂದಿನ ಸೀಟಿನಲ್ಲಿ ಕುಳಿತಿದ್ದಾರೆ. ಹಿಂದೆ ಕುಳಿತು ಕಾರು ಹೊರಟ ಮೇಲೆ, ರಾಗಿಣಿಗೆ ಗಮನಕ್ಕೆ ಬಂದದ್ದು, ಈ ಕಾರಿನಲ್ಲಿ ಸೆಂಟ್ರಲ್ ಲಾಕ್ ಇದೆ ಎಂದು! "ಅಯ್ಯೋ ದೇವರೇ, ನನ್ನನ್ನು ಹೆಚ್ಚು ಕಡಿಮೆ ಇವರು ತಮ್ಮ ಬಲೆಗೆ ಹಾಕಿಕೊಂಡಿದ್ದಾರೆ. ಇನ್ನೇನು ಗತಿ!" "ಹೀಗೆ ಇವರ ಜೊತೆ ಬರಲು ಒಪ್ಪಲೇ ಬಾರದಿತ್ತು...ಛೇ! ಆ ಕರಿಯನದೂ ಬರೀ ನಾಟಕ. ಸಿಲಿಂಡರ್ ಇದ್ದಂತಿತ್ತು. ಆಮೇಲೆ ಆ ಡ್ರೈವರ್ ಬಂದ ಮೇಲೆ ಮತ್ತೆ ಕ್ಲಚ್ ನಾಟಕ! ಕೃಷ್ಣಾ...ನೀನೇ ಕಾಪಾಡಪ್ಪಾ!" ಎಂದು ಕೃಷ್ಣನನ್ನು ನೆನೆಯುತಿದ್ದ ರಾಗಿಣಿಯ ಎದೆ ಜೋರಾಗಿ ಢವಗುಟ್ಟತೊಡಗಿತು!

"ಈಗ ಏನು ಮಾಡುವುದು? ಕಾರಿನಿಂದ ಜಿಗಿಯಲೇ?" ಕಾರು ತುಂಬಾ ವೇಗದಿಂದ ಹೋಗುತ್ತಿದ್ದರಿಂದ ಆ ಯೋಚನೆ ಥಟ್ಟನೇ ಬಿಟ್ಟಳು ರಾಗಿಣಿ. ಆದರು ಮೆಲ್ಲನೆ ಲಾಕ್ ತೆಗೆಯುವ ಪ್ರಯತ್ನ ಮಾಡೇಬಿಡೋಣ ಎಂದೆನಿಸಿ, ಮೆಲ್ಲನೆ ಹಿಂಬಾಗಿಲನ್ನು ತೆರೆಯುವ ಪ್ರಯತ್ನ ಮಾಡಿದಳು.
ಊಹೂಂ...ಬಾಗಿಲು ತೆರೆಯಲು ಸಾಧ್ಯವಾಗುತ್ತಿಲ್ಲ! ಹಿಂದಿನ ಬಾಗಿಲುಗಳನ್ನು ಚೈಲ್ಡ್ ಲಾಕ್ ಮಾಡಿದ್ದಾರೆ ಎಂದು ಆಗಲೇ ರಾಗಿಣಿಗೆ ತಿಳಿದದ್ದು! ತನ್ನ ಸ್ಥಿತಿ-ಅಸಹಾಯಕತೆ ನೆನೆಸಿ ರಾಗಿಣಿಯ ಕಣ್ಣುಗಳು ನೀರೂರಿದವು. ರಾಗಿಣಿ ಕಣ್ಣು ಮುಚ್ಚಿ ದೇವರನ್ನು ನೆನೆಯುತ್ತಾ ಕುಳಿತಳು. ಕಾರ್ ರೊಯ್ಯನೆ ಸಾಗುತ್ತಿತ್ತು. ಮುಂದೆ ಕುಳಿತಿದ್ದ ಇಬ್ಬರೂ ಒಂದೇ ಸಮನೆ ಮಾತನಾಡುತ್ತಿದ್ದರು. ಆಗಾಗ ಜೋರಾಗಿ ನಗುತ್ತಿದ್ದರು. ರಾಗಿಣಿಯ ಮನಸಿನಲ್ಲಿ ನೂರಾರು ಯೋಚನೆಗಳು.
"ಇವರಿಬ್ಬರೂ ನನಗೆ ಏನಾದರೂ ಮಾಡಿದರೆ ಏನು ಮಾಡುವುದು? ಕಿರುಚಬೇಕೆ? ನನ್ನ ಬಳಿ ಯಾವುದೇ ಆಯುಧ ಇಲ್ಲ? ಎನು ಮಾಡುವುದು? ಪರ್ಸ್ ಬಿಟ್ಟರೆ ಏನು ಇಲ್ಲ. ನೋಡುವುದಕ್ಕೆ ಇವರಿಬ್ಬರೂ ಧಾಂಡಿಗರಂತಿದ್ದಾರೆ! ನನ್ನ ಕೈಲೇನಾಗುತ್ತದೆ!"
ಕಾರು ಗಕ್ಕನೆ ನಿಂತಿತು. ಯೋಚನೆಗಳಲ್ಲಿ ಮುಳುಗಿದ್ದ ರಾಗಿಣಿಯನ್ನು ಎಚ್ಚರಿಸಿತು ಅದೇ ಗಡಸು ಧ್ವನಿ. "ಇಲ್ಲಿ ಸೈನ್ ಮಾಡಿ ಮೇಡಮ್! ತುಂಬಾ ಸಾರಿ! ನಿಮಗೆ ತುಂಬಾ ಕಷ್ಟ ಆಯ್ತು". ರಾಗಿಣಿ ಕಾರಿನ ಕಿಟಕಿಯ ಆಚೆ ನೋಡಿದಳು. ಅರೆ! ಮನೆ ಬಂದಿದೆ! ಅಷ್ಟರಲ್ಲೇ ಕಾರ್ ಶಬ್ದ ಕೇಳಿ ಅಮ್ಮ, ತಮ್ಮ ಬಾಗಿಲು ತೆರೆದು ಹೊರಬಂದರು! ಡ್ರೈವರ್ ಹೇಳುತ್ತಿದ್ದ. "ಇಷ್ಟು ಕಷ್ಟ ಆದರೂ ಈ ಅವಾಂತರದಿಂದ ಒಂದ್ ಉಪಯೋಗ ಆಯ್ತು ಮೇಡಮ್! ನೋಡಿ...ಇವನು ನನ್ ಚಡ್ಡಿ ದೋಸ್ತು! ನಮ್ಮೂರವನೇ ಇವನು. ಇದೇ ಊರಲ್ಲಿದ್ರೂ ನಾವಿಬ್ರೂ ಡ್ರೈವಿಂಗ್ ಕೆಲಸದಲ್ಲೇ ಇದ್ರೂ 5 ವರ್ಷದಿಂದ ಸಿಕ್ಕಿರಲಿಲ್ಲ! ನಿಮ್ಮಿಂದ ಇವನನ್ನು ಭೇಟಿ ಮಾಡಿದ ಹಾಗಾಯ್ತು - ಥ್ಯಾಂಕ್ಸ್ ಮೇಡಮ್! ಗುಡ್ ನೈಟ್!"

ಮನೆಯನ್ನು ನೋಡಿದ ರಾಗಿಣಿಗೆ ಮನಸ್ಸಿನಲ್ಲಿ ಆವರಿಸಿದ ಆತಂಕ-ಭಯಗಳೆಲ್ಲಾ ಕ್ಷಣದಲ್ಲೇ ಮಾಯವಾಗಿ, ಥಟ್ಟನೆ ಕಾರಿನಿಂದ ಇಳಿದು ಮನೆಯ ಒಳಗೆ ಓಡಿದಳು.
ರಾಜ "ನಿನ್ ಫೋನ್ ಬ್ಯಾಟರಿ ಕೆಟ್ಟು ಹೋದರೆ ಏನಾಯ್ತು? ಆ ಡ್ರೈವರ್ ಫೋನ್ ತೊಗೊಂಡ್ ಒಂದ್ ಫೋನ್ ಮಾಡಕ್ಕೆ ಆಗ್ತಾ ಇರಲಿಲ್ವ? ಅಮ್ಮ ಪಾಪ, ಎಷ್ಟು ಒದ್ದಾಡಿಬಿಟ್ಟರು ಗೊತ್ತಾ??? ಈಗ ಸರಿಯಾಗಿ ಬೈಸ್ಕೊಳಕ್ಕೆ ರೆಡಿ ಆಗಿರು" ಅಂತ ಹೇಳಿದಾಗಲೇ ರಾಗಿಣಿಗೆ ಹೊಳೆದಿದ್ದು, ಹಾಗೆ ಫೋನ್ ಮಾಡಬಹುದಿತ್ತೆಂದು !! "ಅಮ್ಮ ಎಷ್ಟೇ ಬಯ್ಯಲಿ ಪರವಾಗಿಲ್ಲ! ಬದುಕಿದೆಯಾ ಬಡ ಜೀವ!" ಎಂದು ನೆಮ್ಮದಿಯಿಂದ ಮುಖ ತೊಳೆದಳು ರಾಗಿಣಿ.

--ಶ್ರೀನಿವಾಸ್ ಪ. ಶೇ.
(ನನ್ನ 2008ರ ಮೂಲ ಕಥೆಯನ್ನು ಕೊಂಚ ಬದಲಿಸಿದೆ)

Sunday, October 13, 2013

ಒಂದು ಬೆಳಗಿನ ಕಥೆ

ನನ್ನ ಸ್ಕೂಲ್ ಶುರುವಾಗುತ್ತಿದ್ದುದು ಸುಮಾರು 11.45. ಅಂದರೆ, ಚಿಕ್ಕವನಿದ್ದಾಗ, ಪ್ರತಿ ದಿನವೂ ಬೇಗ ಏಳೋ ಪದ್ಧತಿಯಂತೂ ನನಗಿರಲೇ ಇಲ್ಲ. ಇನ್ನು ಮನೆಯಲ್ಲಿ, ಎಲ್ಲರಿಗಿಂತ ನಾನೇ ಚಿಕ್ಕವನು. ಹಾಗಾಗಿ, ಅಕ್ಕನಿಗಿಂತ ನನ್ನ ಮೇಲೆ ಅಮ್ಮನಿಗೆ ಒಂದಿಷ್ಟು ಹೆಚ್ಚೇ ಪ್ರೀತಿ! ನಾನು ಮತ್ತು ನನ್ನ ಅಕ್ಕ, ಒಂದೇ ಸ್ಕೂಲಿಗೆ ಹೋಗುತ್ತಿದ್ದೆವಾದರೂ, ಅವಳು ಮಾತ್ರ ಬೇಗ ಏಳಬೇಕು. ಪಾಪ, ಮೊದಲು ಹುಟ್ಟಿದ್ದೇ ಅವಳು ಮಾಡಿದ ತಪ್ಪು! ನಂತರ ಹುಟ್ಟಿದ್ದು ನನ್ನ ಭಾಗ್ಯ!

ಬೆಳಿಗ್ಗೆ, ಸುಮಾರು ಎಂಟು ಘಂಟೆಯಾದಾಗ ನಾನು ಎದ್ದು, ಮುಖ ತೊಳೆದು ಬರುವ ಹೊತ್ತಿಗೆ ಅಮ್ಮ ಕೊಡುತ್ತಿದ್ದ 1/4 ಕಾಫಿ. ಇದೇನು 1/4 ಕಾಫಿ ಅಂದಿರಾ? ಇನ್ನೂ ಚಿಕ್ಕವನಿದ್ದಾಗ ಮಾಲ್ಟೋವ-ಹಾಲನ್ನು ಮಾತ್ರ ಕುಡಿಯುತ್ತಿದ್ದ ನಾನು, ’ದೊಡ್ಡವರು ಮಾತ್ರ ಕಾಫಿ ಕುಡೀತಾರೆ, ನಂಗೆ ಯಾಕೆ ಕೊಡಲ್ಲ’ ಎಂದು ಸಿಕ್ಕಾಪಟ್ಟೆ ಗಲಾಟೆ ಮಾಡ್ತಿದ್ದೆ. ’ಕಾಫಿ ಕುಡಿದರೆ ಕಪ್ಪಗಾಗ್ತೀಯ ಕಣೋ’ ಎಂಬ ಬುರುಡೆ ನನ್ನ ಬಳಿ ನಡೆದಿರಲಿಲ್ಲ. ಕೊನೆಗೆ, ನನ್ನ ಹಟಕ್ಕೆ ಬಿದ್ದು ಅಮ್ಮ ಅಂಗಡಿಯಿಂದ ನನಗೊಂದು, ಅಕ್ಕನಿಗೊಂದು, ಪುಟಾಣಿ ಸ್ಟೀಲ್ ಲೋಟ ತಂದಿದ್ದರು. ಆ ಲೋಟದಲ್ಲೂ ಅರ್ಧದಷ್ಟು ಕಾಫಿ! ಆ ಕಾಫಿಯನ್ನು ಈಗ ಒಂದೇ ಗುಟುಕಿಗೆ ಕುಡಿಯಬಹುದೇನೋ. ಆಗ, ಅಷ್ಟು ಕಾಫಿ ಕುಡಿಯುವುದರಲ್ಲೇ ಏನೋ ಒಂದು ಥ್ರಿಲ್! ದಿನವೂ, ಈ 1/4 ಕಾಫಿ ಕುಡಿಯುತ್ತಾ, ನೆಲದ ಮೇಲೆ ’ಕನ್ನಡಪ್ರಭ’ ಹರಡಿಕೊಂಡು ಓದಲೇಬೇಕು. ಮೊದಲಿಗೆ ಮುಖ್ಯವಾದ ಸುದ್ದಿಗಳು. ಇಂದಿನ ದಿನಗಳಲ್ಲಿ ಮುಂದಿನ ಪುಟದಲ್ಲಿ ಮಾಯವಾಗಿರುವ ’ಸಂಪಾದಕೀಯ’ ಆಗೆಲ್ಲಾ, ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ’ಸಂಪಾದಕೀಯ’ ಬಂದಾಗಲೆಲ್ಲ, ಪತ್ರಿಕೆಯವರನ್ನು ಮನಸ್ಸಿನಲ್ಲೇ ಬಯ್ದುಕೊಂಡು, ನೇರವಾಗಿ ನಾನು ಕೊನೆ ಪೇಜಿನಲ್ಲಿರುವ ಕ್ರೀಡಾ ಸುದ್ದಿ ಓದಲು ಶುರು ಮಾಡಿ ಬಿಡುತ್ತಿದ್ದೆ. ದಿನ ನಿತ್ಯದ ಪೇಪರ್‍ನಲ್ಲಿ ನನಗೆ ಮುಖ್ಯವಾದವು ಇವೆರಡೇ - ಮುಂದಿನ ಪುಟದಲ್ಲಿ ಬರುತ್ತಿದ್ದ ಸುದ್ದಿಗಳು ಹಾಗೂ ಕ್ರಿಕೆಟ್. ಇದಲ್ಲದೇ ಕ್ರೀಡಾ ಪುಟದಲ್ಲಿ ಯಾವುದೇ ಆಟವಿರಲಿ, ’ಪಾಕಿಸ್ತಾನ್’ ಎಂದು ಎಲ್ಲಾದರೂ ಕಾಣಿಸಿಕೊಂಡರೆ, ಭಾರತ ಪಾಕಿಸ್ತಾನವನ್ನು ಸೋಲಿಸಿತೇ ಇಲ್ಲವೇ ಎಂದು ನೋಡಲೇ ಬೇಕು. ಭಾರತ ಗೆದ್ದಿದ್ದರೆ, ಏನೋ ಸಾಧಿಸಿದಂತಹ ಹೆಮ್ಮೆ. ಇದನ್ನು ಬಿಟ್ಟರೆ, ’ಮಾಂತ್ರಿಕ ಮಾಂಡ್ರೇಕ್’ ಕಾರ್ಟೂನ್! ನನ್ನಕ್ಕನಿಗೆ, ಪೇಪರ್ ನಲ್ಲಿ ಎರಡು ಮತ್ತು ಮೂರನೇ ಪೇಜಿನಲ್ಲಿ ಬರುತ್ತಿದ್ದ ವಿಷಯಗಳು ಹೆಚ್ಚು ಪ್ರೀತಿ. ಅಂದರೆ, ಅವಳಿಗೆ ’ಎಲ್ಲೆಲ್ಲಿ ಕೊಲೆಯಾಗಿದೆ’, ’ಎಲ್ಲಿ ಸುಲಿಗೆ ನಡೆದಿದೆ’ ಎಂಬಂತಹಾ ಸುದ್ದಿಗಳು ಹೆಚ್ಚು ಪ್ರಿಯ. ಅವಳಿಂದಲೇ ನಾನು ’ಉರುಫ಼್’, ಅಲಿಯಾಸ್ ಪದಗಳನ್ನು ಕಲಿತಿದ್ದು ಎಂದು ಹೇಳಿದರೆ ತಪ್ಪಾಗಲಾರದು!

ನಿಧಾನವಾಗಿ ಪೇಪರ್ ಓದಿ, ಸ್ನಾನ ಮಾಡಿ ಬರುವ ಹೊತ್ತಿಗೆ ಸುಮಾರು ಒಂಬತ್ತಾಗಿರುತ್ತಿತ್ತು. ಇಷ್ಟು ಹೊತ್ತಿಗೆ ಅಣ್ಣ ಊಟವನ್ನು ಮಾಡಿ ಆಫೀಸಿಗೆ ಹೊರಟಾಗಿರುತ್ತಿತ್ತು! ಮನೆಯಲ್ಲಿರುವ ಗಡಿಯಾರ ’ಟೈಂ ಸರಿಯಾಗಿ ತೋರಿಸುತ್ತಾ?’ ಎಂಬ ವಿಚಿತ್ರ ಅನುಮಾನ, ಅಕ್ಕನಿಗೆ ಪ್ರತಿ ದಿನವೂ ಕಾಡುತ್ತಿತ್ತು! ಅವಳ ಅನುಮಾನವನ್ನು ಹೋಗಲಾಡಿಸುತ್ತಿದ್ದುದು ಒಂದೇ - ರೇಡಿಯೋ ! ಅಮ್ಮ ರೇಡಿಯೋ ಹಾಕದೇ ಹೋದರೂ, ಅಕ್ಕ ದಿನವೂ ತಪ್ಪದೇ ’ವಿವಿಧ ಭಾರತಿ’ ಕೇಳಿಸಿಕೊಳ್ಳಲೇಬೇಕು. ’ನಂದನ’ ಕಾರ್ಯಕ್ರಮವನ್ನು ನಡೆಸುವಾಕೆ, "ಈಗ ಸಮಯ ಸರಿಯಾಗಿ ಒಂಬತ್ತು ಘಂಟೆ ಹದಿನೈದು ಸೆಕೆಂಡುಗಳು" ಎಂದು ಹೇಳಿದಾಗ, ಅಕ್ಕ ಮನೆಯಲ್ಲಿರುವ ಪುಟ್ಟ ಗಡಿಯಾರವನ್ನು ನೋಡಿ ಮತ್ತೊಮ್ಮೆ ಖಚಿತಪಡಿಸಿಕೊಳ್ಳುತ್ತಿದ್ದಳು.

’ನಂದನ’ದಲ್ಲಿ ಹಾಡುಗಳು ತೇಲಿ ಬರುತ್ತಿದ್ದಾಗ ನಾವುಗಳು ಹಸಿರು ಮತ್ತು ಬಿಳಿ ಬಣ್ಣದ ಸಣ್ಣ ಚೌಕಲಿಯ ಯೂನಿಫಾರಂ ಧರಿಸಿಕೊಂಡು ಬಿಡುತ್ತಿದ್ದೆವು! ಅಲ್ಲಿ ಜಾನಕಿ ಹಾಡುತ್ತಿದ್ದರೆ, ಇಲ್ಲಿ ಅಮ್ಮ, ಅಕ್ಕನಿಗೆ ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ, ಬೈತಲೆಯನ್ನು ಬಾಚಿ, ಎರಡು ಜಡೆಯನ್ನು ಮೆಲ್ಲಗೆ ಹೆಣೆಯಬೇಕು. ಅತ್ತ ಕಡೆ ಅಮ್ಮ ತಲೆ ಬಾಚುತ್ತಿದ್ದರೆ, ಅಕ್ಕನ ಲೋಕವೇ ಬೇರೆಯಾಗಿರುತ್ತಿತ್ತು. ಅಲಂಕಾರದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಿರಲಿಲ್ಲ ಅವಳು. ಯಾವುದೇ ಹಾಡು ಬರುತ್ತಿರಲಿ, ಅಕ್ಕ ಅದರೊಂದಿಗೆ ಹಾಡಿಬಿಡುತ್ತಿದ್ದಳು. ಹಾಡುವುದು ಎನ್ನುವುದಕ್ಕಿಂತ ಗುನುಗುವುದು ಎಂದರೆ ಹೆಚ್ಚು ಸರಿ. ರಾಗಕ್ಕೆ ಸರಿಯಾಗಿ ಹಾಡುವುದಕ್ಕಿಂತ ಅವಳಿಗೆ ಸಾಹಿತ್ಯದ ಕಡೆ ಹೆಚ್ಚು ಗಮನ. ಪ್ರತಿ ದಿನವೂ ಬರುತ್ತಿದ್ದ ನೂರಾರು ಹಾಡುಗಳನ್ನು ಸರಾಗವಾಗಿ ಹೇಳಿಬಿಡುತ್ತಿದ್ದಳು. ದಿನವೂ ಯಾವುದೋ ಒಂದು ವಿಷಯಕ್ಕೆ, ಅಕ್ಕ , ಅಮ್ಮನ ಬಳಿ "ಮರೆತು ಹೋಯ್ತಮ್ಮಾ" ಎಂದು ಹೇಳಿ ಬಯ್ಸಿಕೊಳ್ಳುವುದು ಸಾಮಾನ್ಯವಾದರೂ, ಚಿತ್ರಗೀತೆಗಳ ಸಾಹಿತ್ಯವನ್ನು ಎಂದೂ ಮರೆತದ್ದಿಲ್ಲ! ಅವಳು ಆ ಕಡೆ ಹಾಡುತ್ತಿದ್ದರೆ, ಅಕ್ಕನಿಗಿಂತ ಚೆನ್ನಾಗಿ ಬರೆದು ಪರೀಕ್ಷೆಗಳನ್ನು ಲೀಲಾಜಾಲವಾಗಿ ಗೆದ್ದು ಬರುತ್ತಿದ್ದ ನನಗೆ, ಈ ಹಾಡುಗಳೇಕೆ ನೆನಪಿನಲ್ಲಿರುವುದಿಲ್ಲ ಎಂಬ ಯೋಚನೆ, ಇದಲ್ಲದೇ, ರೇಡಿಯೋದಲ್ಲಿ ಹಾಡಿನ ಪಲ್ಲವಿ ಬರುತ್ತಿದ್ದ ಕ್ಷಣವೇ, ’ಇದು ವಾಣಿ ಜಯರಾಂ’, ’ಇದು ಜಾನಕಿ’ ಎಂದು ಅಕ್ಕ ಸರಿಯಾಗಿ ಹೇಳಿದಾಗ, ನನಗೆ ಯಾಕೆ ಇದು ತಿಳಿಯುವುದಿಲ್ಲ ಎಂದು ಬೇಜಾರಾಗುತ್ತಿತ್ತು. ಆಗೆಲ್ಲಾ, ನನಗೆ ಸಾಹಿತ್ಯಕ್ಕಿಂತ, ಹಾಡುಗಳಲ್ಲಿ ಬರುತ್ತಿದ್ದ ಸಂಗೀತದ ಬಗ್ಗೆ ಗಮನ. ’ಡುಂಡುಡುಂ - ಡುಂಡುಡುಂ’ ಎಂದು ಹಾಡು ಡ್ರಂ ಶಬ್ದದ ಜೊತೆಗೆ ಶುರುವಾಗುತ್ತಿದ್ದ ಹಾಗೆ, ಇದು ರಾಜನ್-ನಾಗೇಂದ್ರ ಅವರ ಹಾಡೇ ಎಂದು ಖಚಿತವಾಗಿ ಹೇಳಿಬಿಡುತ್ತಿದ್ದೆ. ತಲೆ ಸುತ್ತಿ ಬರುವಂತಹಾ ಶಬ್ದದೊಂದಿಗೆ ಆರಂಭವಾಗುತ್ತಿದ್ದ ’ಪ್ರಿಯದರ್ಶಿನಿ’ ಜಾಹಿರಾತನ್ನು ಕೇಳಿ ನಾನು-ನನ್ನ ಅಕ್ಕ ನಗಾಡುತ್ತಿದ್ದೆವು. ಆ ಜಾಹಿರಾತು ಬಂದು ಹೋದಮೇಲೆ, ನಾವಿಬ್ಬರು ಸೇರಿ, ಮತ್ತೊಮ್ಮೆ ’ಟೀಂವ್ ಟೀಂವ್ ಟಿವ್-ಟಿವ್-ಟಿವ್-ಟಿವ್’ ಎಂದು ಮತ್ತೆ ಮತ್ತೆ ಹೇಳುತ್ತಾ, ’ಅಂದ ಚೆಂದದಾ ವಸ್ತ್ರ ವೈಭವ ಬಣ್ಣ ಬಣ್ಣದಾ ಉಡುಗೆ ತೊಡುಗೆಗೆ ಹೆಸರಾಗಿದೆ ಪ್ರಿಯದರ್ಶಿನಿ...ಆಹಾ ಪ್ರಿಯದರ್ಶಿನಿ’ ಎಂದು ಮತ್ತೊಮ್ಮೆ ಹಾಡಿ ನಗಲೇಬೇಕು!
ಅತ್ತ ಕಡೆ ಗೋಪಾಲ್ ಹಲ್ಲು ಪುಡಿಯ ಜಾಹಿರಾತು ಬರುತ್ತಿದ್ದರೆ, ನಮ್ಮ ಮನೆಯಲ್ಲಿ ಬಳಸುತ್ತಿದ್ದ, ’ನಂಜನಗೂಡು ಹಲ್ಲು ಪುಡಿ’ ಜಾಹಿರಾತು ಏಕೆ ಬರುವುದಿಲ್ಲವಲ್ಲ ಎಂಬ ಕ್ಷಣ ಮಾತ್ರದ ಬೇಸರ. ಇನ್ನು ದಸರಾ-ದೀಪಾವಳಿ ಹಬ್ಬಗಳು ಬರುತ್ತಿದ್ದ ಹಾಗೆ, ಸಿಲ್ಕ್ ಸೀರೆಗಳನ್ನು ಮಾರುವ ಅಂಗಡಿಗಳ ಜಾಹಿರಾತುಗಳ ಭರಾಟೆ. ’ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಭಾರೀ ರಿಯಾಯತಿ ಮಾರಾಟ. ಇಂದೇ ಭೇಟಿ ಕೊಡಿ ಧೋಂಡೂಸ ಸಿಲ್ಕ್ಸ್, ಚಿಕ್ಕಪೇಟೆ, ಬೆಂಗಳೂರು" ಎಂಬಂತಹಾ ಜಾಹಿರಾತುಗಳು. ಎರಡು ಮೂರು ದಿನಕ್ಕಾದರೂ ಒಮ್ಮೆ, ಗಂಧದ ಗುಡಿಯ ’ನಾವಾಡುವ ನುಡಿಯೇ ಕನ್ನಡ ನುಡಿ’ ಹಾಡು ಬರಲೇ ಬೇಕು. ಬಹುಶ: ವಿವಿಧ ಭಾರತಿಯವರ ಬಳಿಯಿದ್ದ ಈ ಹಾಡಿನ ಗ್ರಾಮಫೋನ್ ಡಿಸ್ಕ್ ಕೆಟ್ಟಿತ್ತೇನೋ, ಹಾಗಾಗಿ, ಈ ಹಾಡಂತೂ ಎರಡೆರಡು ಬಾರಿ ಬಂದ ಮೇಲೆ ನಿಲ್ಲುವುದು. ನಾವುಗಳು ತಿಂಡಿಯನ್ನು ತಿಂದು, ಮಾಲ್ಟೋವ ಕುಡಿಯುವ ವೇಳೆಗೆ, ಸುಮಾರು ಹತ್ತು ಘಂಟೆಯಾಗಿ, ’ನಂದನ’ ಕಾರ್ಯಕ್ರಮ ಮುಗಿಯುತ್ತಿತ್ತು.

ಇಷ್ಟು ವೇಳೆಗೆ ಅಮ್ಮನಿಗೆ ಬಿಡುವು. ನಾವಿದ್ದ ಪುಟ್ಟ ಮನೆಯ ಹೊರಗಡೆಯಿದ್ದ ಮೆಟ್ಟಿಲ ಮೇಲೆ ಕುಳಿತುಕೊಳ್ಳುವ ಹೊತ್ತಿಗೆ ಸರಿಯಾಗಿ ಮಹಡಿಯ ಮೇಲಿನ ಐಯ್ಯರ್ ಮಾಮಿ ಮಾತಿಗೆ ಬಂದು ಬಿಡುತ್ತಿದ್ದರು. ಮಾಮಿಯ ಜೊತೆಗೆ ಅಮ್ಮ ಮಾತಿಗೆ ಕುಳಿತರೆ, ಪ್ರಪಂಚ ಮುಳುಗುವವರೆಗೂ ಮಾತು ನಿಲ್ಲದು. ಅತ್ತ ಕಡೆ ಅಮ್ಮ ಹರಟುತ್ತಾ ಕುಳಿತರೆ, ’ಅಕ್ಕನಿಗೆ ಮಾತ್ರ ಬಾಚಿ, ನನಗೆ ತಲೆಯನ್ನು ಬಾಚದೇ ಹರಟುವುದಿಕ್ಕೆ ಕುಳಿತುಬಿಟ್ಟರಲ್ಲಾ’ ಎಂದು ಅಮ್ಮನ ಮೇಲೆ ಒಂದಿಷ್ಟು ಕೋಪ. ’ಸ್ಕೂಲಿಗೆ ಟೈಂ ಆಯ್ತು, ಬೇಗ ಬಾಚು’ ಎಂದು ಪದೇ ಪದೇ ಹೇಳುತ್ತಾ ಹರಟೆಯನ್ನು ಅರ್ಧಕ್ಕೇ ತುಂಡರಿಸುವ ವ್ಯರ್ಥ ಪ್ರಯತ್ನ. ನನ್ನ ಗಲಾಟೆಯನ್ನು ತಡೆಯದೇ, ಅಮ್ಮ ಹರಟೆಯ ಮಧ್ಯದಲ್ಲೇ, ನನ್ನ ತಲೆಗೂ ಒಂದಿಷ್ಟು ಕೊಬ್ಬರಿ ಎಣ್ಣೆಯನ್ನು ಹಚ್ಚಿ, ಬಾಚಲು ನನ್ನ ಗಲ್ಲವನ್ನು ಬಿಗಿಯಾಗಿ ಹಿಡಿದುಬಿಡುತ್ತಿದ್ದರು. ಇಷ್ಟು ಹೊತ್ತೂ, ’ಅಮ್ಮ ತಲೆ ಬಾಚುತ್ತಿಲ್ಲ’ ಎಂಬ ನನ್ನ ಕೋಪ, ಈಗ ಹೊಸ ರೂಪವನ್ನು ಪಡೆದುಕೊಳ್ಳುತ್ತಿತ್ತು. ’ಇಷ್ಟು ಹೊತ್ತು ನಾನೇ ತಲೆ ಬಾಚು ಎಂದು ಗಲಾಟೆ ಮಾಡಿದ್ದು, ಆದರೆ ಅಮ್ಮ ನನ್ನ ಗಲ್ಲವನ್ನು ಇಷ್ಟು ಬಿಗಿಯಾಗಿ ಏಕೆ ಹಿಡಿಯುತ್ತಾರೆ’ ಎಂಬ ಕೋಪ. ಮನಸ್ಸಿನಲ್ಲೇ ಮೆಲ್ಲನೆ ಅಮ್ಮನನ್ನು ಬಯ್ದುಕೊಂಡು ಬಿಡಿಸಿಕೊಳ್ಳಲು ಕೊಸರಾಡುತ್ತಿದ್ದೆ. ಈ ನನ್ನ ಪ್ರಯತ್ನದಿಂದ ಅಮ್ಮನ ಹಿಡಿತ ಸಡಿಲವಾಗದೇ ಮತ್ತಷ್ಟು ಬಲವಾಗಿಬಿಡುತ್ತಿತ್ತು. ಮಾಮಿಯ ಜೊತೆಗಿನ ಹರಟೆಯ ಮಧ್ಯದಲ್ಲೂ, ನನ್ನ ಕೂದಲುಗಳು ಶಿಸ್ತಿನ ಸಿಪಾಯಿಗಳಂತೆ ಒಪ್ಪಾಗಿ ಒಂದೇ ರೀತಿ ಕುಳಿತು ಬಿಡುತ್ತಿದ್ದವು.

ಇವೆಲ್ಲಾ ಮುಗಿಯುವ ಹೊತ್ತಿಗೆ ಸ್ಕೂಲಿಗೆ ಹೊರಡುವ ಸಮಯ. ಅಕ್ಕ, ನಾನೂ, ಒಂದೇ ಸ್ಕೂಲಿಗೆ ಹೋಗುತ್ತಿದ್ದರೂ ನಾನೂ, ಅವಳು ಬೇರೆ ಬೇರೆಯಾಗಿಯೇ ಹೋಗುತ್ತಿದ್ದುದು. ಸುಮಾರು 2 ಕಿ.ಮೀ ದೂರವಿದ್ದ ಸ್ಕೂಲಿಗೆ, ಪ್ರತಿ ದಿನವೂ ಹೋಗುವ ಮುನ್ನ ನಾನು ಪಕ್ಕದ ರೋಡಿನಲ್ಲಿದ್ದ ನನ್ನ ಅಚ್ಚುಮೆಚ್ಚಿನ ಗೆಳೆಯನ ಮನೆಗೆ ಮೊದಲು ಹೋಗಬೇಕು. ಅವನ ಜೊತೆಗೇ ನಾನು ಸ್ಕೂಲಿಗೆ ಹೋಗುವುದು. ಅವನು ಇನ್ನೂ ರೆಡಿಯಾಗಿಲ್ಲವಾದರೆ, ಅವರ ಮನೆಯಲ್ಲೊಂದಷ್ಟು ಹೊತ್ತು ಕುಳಿತುಕೊಳ್ಳುವುದು. ನಂತರ, ಅದೂ ಇದೂ ಹರಟುತ್ತಾ ಸ್ಕೂಲಿಗೆ ಮೆಲ್ಲಗೆ ಹೋಗುವುದು.

ಆಗ ಪ್ರತಿ ದಿನ ಬೆಳಗ್ಗೆ, ಯಾವುದೇ ಗಡಿಬಿಡಿಯಿರಲಿಲ್ಲ. ತಲೆ ಹೋಗುವಂಥಹಾ ಚಿಂತೆ ಮೊದಲೇ ಇರಲಿಲ್ಲ...ಆದರೆ ಈಗ...?

Friday, October 11, 2013

Killer Cyclone 'Phailin' has arrived...Who names it?


(This is based on my Kannada blog written last year)

Around same time last year, USA was hit by major Hurricane 'Sandy'.
It caused major havoc in eastern part of USA, resulting in damages estimated close to 68 billion$.

Now, we have killer Cyclone 'Phailin' in India.
This super storm is almost half size of India & has been marked as Level-5(highest - most dangerous) Cyclone. It is set to pound India, with estimated wind speeds of around 220 km an hour.

Approximately 260,000 people living in coastal areas of Andhra Pradesh & Odisha have been asked to vacate. While we all pray for the safety of every one, one might wonder who names these Cyclones.

Last year, India saw 'Neelam'. Earlier this year, we had 'Mahasen'. And now, dangerous 'Phailin'!
Few years back, we had seen 'Katrina'. If you are curious about these names, read further...

***

While Sandy hit America, naturally my mother was worried about me.
In telephonic conversation, I consoled her - "Don't worry! We are very far from East Coast. We are not affected from Sandy."
At the same time, "Neelam" was about to hit Indian coasts. Mom said, "Sandy in US...here 'Neelam' is coming...All Cylones are coming with names attached, these days!". I teased her, "How can Cyclone come with names? We humans, name these Cyclones...Remember we had 'Laila' few years back?".
She did not remember 'Laila'. She asked me innocently, "Is it? If 'Laila' had come, will 'Majnoo' come too?". We ended that, conversation with hearty laughs, but little did I know that, 'Majnoo' was not going to come!

While 'Sandy' continued to create ruckus in USA, twitteratis & Facebookies created major war between Men & Women by asking "Is 'Sandy' - 'Sandeep' or 'Sandhya'?".
Husband, who argued that, 'Sandy' is indeed 'Sandhya' and NOT 'Sandeep', ended up cooking for weeks!
This was another story, which went around facebook world...


While Americans were worried about the damage created by Hurricane Sandy, my wife was very agitated. She said to me, "This is utter cheating! Why all hurricanes need to be named after girls! Earlier it was 'Katrina', now 'Sandy', this is ridiculous!".
Upon hearing this, I could not control my inner joy! I blurted out, "Aah...this is so obvious!!! Why should you even get agitated about this!".
I knew major damage was already done with my statement, but unfortunately, I could not hide my smile either. Married men can imagine my plight now!
Despite all this & cold-war with my wife, which went on for good long time, I was very very happy that, she had accepted that, 'Sandy' as a girl!

***

By this time, all girls who are reading this blog, might be getting ready to start third world war.
So, I have to say something very important.

Not all Hurricanes are girls. In future, you will see, 'Aakash', 'Tony' & 'Saagar', but 'Majnoo' very unlikely!
Are you wondering, how can I say that, so confidently? There is a logic behind it.
There is a list of names for Cyclone, similar to our Hindu system of naming each year with 'Prabhava'/'Vibhava' etc.

Now, you might ask me, "If there was any such list, then why we never heard about these names, when we were kids.
Most of us know about 'Prabhava-Vibhava' since elders thoughts us at home. Why didn't they teach us about this list then?"
There is reason for that too!

Cyclone naming system was started very recently, in 2004. Based on this list, first Cyclone to hit India was 'Onil', then came 'Agni'.
BUT, you might not have heard them, unless they are major Cyclones. Many many cyclones occur every year, not every one gets highlighted in media.
Very few like 'Laila', 'Katrina', 'Irene' might last in our memories for good amount of time due to the disasters!

Entire Earth have been divided into various zones. Each zone contain separate list of names.
Based on this, 'Katrina' or 'Sandy' can only 'entertain' countries adjacent to Atlantic Ocean. 'Neelam' can dance only in Indian Ocean.
Process of naming Cyclones & Hurricanes, started accidentally when famous ship named 'Antje', sank in Atlantic Ocean due to Hurricane.
People started started referring that particular hurricane, as 'Antje' Hurricane.

In mid-20th century, people started naming each & every Hurricane. Interestingly initial list contained only girls names! This method changed in 1979 and Boys names were included in the list. Probably, cyclonic storms at home might have forced weather dept employees to change the list. Now, for each hurricanes born in North Atlantic Ocean, boys and girl's names alternate.

Earth has been divided into following zones:

1. Caribbean Sea, Gulf of Mexico and the North Atlantic Zone
2. Eastern North Pacific Zone
3. Central North Pacific Zone
4. Western North Pacific & the South China Sea Zone
5. Australian Zone
6. Nadi's Zone (Parts of South Pacific Ocean)
7. Port Moresby TCWC's Zone
8. Jakarta Zone
9. Northern Indian Ocean Zone
10. Southwest Indian Ocean Zone

Each of this zone has separate headquarters. New Delhi is the head quarter for North Indian Ocean Zone.
List of Names for North Indian Ocean Zone has been prepared by following countries:
India, Pakistan, Sri Lanka, Maldives, Myanmar(Burma), Thailand & Oman.

List of names for North Indian Ocean is here:

Though Indian Meteorogical Department allows public to suggest new names, it is unlikely to modify the list prepared in 2004 in near future. Hence, we might have seen 'Laila' but we are unlikely to see 'Majnoo'.

If you are not still not satisfied with my explanation, you may visit this link:
http://www.wmo.int/pages/prog/www/tcp/Storm-naming.html

This is the secret behind naming of Cyclones!

Finally coming back to curious case of 'Sandy's gender. It is indeed girl or 'Sandhya' because previous Hurricane was 'Rafael' and the one which followed was 'Tony'!

-----------------------------

Notes:

1. For more info visit:
http://www.wmo.int

2. 'Cyclone' and 'Hurricane' are one and the same. Different naming conventions are used in different parts of the world.

Photo Credits:
www.rediff.com
http://www.imd.gov.in/

Friday, October 4, 2013

ಅಲಂಕಾರ


ಕನ್ನಡಿಯ ಮುಂದೆ
ನಿಂತು
ಘಂಟೆಗಟ್ಟಲೆ
ಸಜ್ಜಾಗುತ್ತಿದ್ದವಳ
ಅಲಂಕಾರವನ್ನು
ನೋಡಿ,
’ಉತ್ಪ್ರೇಕ್ಷೆ’
ತಲೆ ತಗ್ಗಿಸಿತು...

ಶ್ರೀ
(3-ಅಕ್ಟೋಬರ್-2013)

ದೃಷ್ಟಿ ಬೊಟ್ಟು

ನಲ್ಲೆ,

ನಿನ್ನ
ಚೆಲುವಿನ ಮೇಲೆ
ದೃಷ್ಟಿ ಬೀಳದಿರಲು,
ಕಣ್ಣ ಪಾಪೆಯ
ತೆಗೆದು
ಗಲ್ಲದ ಮೇಲಿಡಲೇ?

-ಶ್ರೀ
(1-oct-2013)

Monday, May 27, 2013

Is corruption only cancer of India?


Each animal in the wild has its own protocol. Few live in groups and few in isolation. Despite diversity among them in jungle, they do not attack each other unless they are hungry or threatened. Each animal feels threatened, when other animal enters into its imaginary 'safe zone'. In order to protect itself or its cub, animal attacks other animal, which entered into its safe zone.

To understand little more about the safe zone, one can draw an imaginary circle around given animal. Entire area, within the imaginary circle can be considered as 'safe zone'. Radius length of this imaginary circle depends on the type of animal. For example elephants in wild, feel threatened at a distance of 80-100 meters, where as ferocious looking tiger, when not hungry may not attack you, even when you stand in the perimeter of 30 meter. When another animal or human enters in to this zone, they can attack thinking they are in danger. Somewhat similar to this behavior in animals, humans display another trait, what i term as "Home zone".

Each individual has his own 'Home zone'. Individual is not worried about events occurring outside this zone. His mind is preset to focus only on events within his Home Zone and ignore everything else beyond that.

Few examples in this regard will give a better picture.
Typically, most people love to keep their belongings, which fall under 'Home Zone' in orderly fashion. But, which material falls in to the classification of "Personal belongings" varies from person to person. Few may consider, every item, they use daily as personal belongings such as cloths, bag, comb etc. Few may consider the entire house as "personal belonging" and keep the home neat & tidy. Some may not even bother about their cloths or anything at home, but they keep their work related materials in order. Zone in which materials/events which gets given person's immediate attention is what I term as "Home Zone". Size of this zone varies from person to person and given person may enter or exit "Home Zone" umpteen number of times in a day.
We, Indians, have very small "Home zone". I believe 95% or more not concerned about what happens outside our house. I am pretty sure this percentage does not vary by much between educated or uneducated class. Due to this reason, even educated person, do not think twice while tossing empty can/bottle or empty plastic cover road-side.

And no, please do not blame on unavailability of dustbins or garbage collection areas. Does everyone have dustbin in every corner of their house? Definitely, No! If one can carry the junk till the dustbin at home, why not outside?

Recently an attempt was made in Bangalore to keep the area clean near IT Park. Entire stretch of 200 meter was littered with empty cups of plastic, cigarette butts etc. Few sensible activists, whose "Home zone" was much bigger than their houses, tried to tidy up this area & placed umpteen numbers of dustbins within 200 meters. They cleaned up entire area and painted it neat. This entire stretch looked awesome. But this did not last for more few weeks. Garbage was all over again. It is painful to note that, this was done by people, whom society considers "Well-educated" class! Hence, this behavior has nothing to do with how much educated a person is.

It is appalling that more than 90% of Indian men do not think twice before going to urinals on the road side. I cannot understand, why they can't co-relate this same situation to their own mother or sister.

I would like to quote another example, which most people might be able to co-relate.
Consider person X is entering into a reception of his friend's wedding. He sees long line towards the bride & groom. While he looks at the line, his friend Y who is already standing in the line, waves at him, saying 'hello'. Next thing X does is to go next to Y, starts speaking to him casually. In matter of one or two minutes, he merges into the line, well ahead of 20-50 odd people who were waiting ahead of X. Now, was X illiterate? No. Was there any corruption involved? No. Was there any time pressure? No. None of these! But, simply X does not honor the already well formed line/queue. If an educated person such as X, cannot honor such a basic civic sense, in which there was no time-pressure, no money involved, how or why should one expect a miracle from someone else? By now, you may be able to picture this very same situation in hundreds of scenarios like movie theater, stadiums, Temple, Govt offices etc.
When a kid grows up with parents, who do not have basic civic sense, he learns the same behavior. And this passes on from generation to generation.
Developed countries have been successful in enlarging the "Home zones" of every citizen of its country, either by instilling the civic sense in them or by stringent law, feared by them.

For every damn issue faced by Indians, it may very convenient to point to corruption/politician/non-functional government etc, but not every issue is created by them. Every citizen of our country needs to do some introspection. Merely having well-educated non-corrupt person sitting in Vidhana Soudha or Indian Parliament may not have the much impact unless every individual expands his "Home Zone" and considers his society, his town, his country as his "Home zone". An educational reform in this regard may help expanding “Home zone” sooner. But, to achieve this, one need not wait for government to act. It has to start from people like you and me.

"Yatha Raja Thatha Praja" might have been the old proverb. But in present democratic India, "Yatha Praja Thatha Raja" is more apt and real.

Friday, March 15, 2013

ಐ ಮಿಸ್ ಯು!

ಮುನ್ನೂರರವತ್ತೈದು
ದಿನವೂ
ಸೋರುವ ಮೂಗಿನ
ಒಡೆಯನ,
ನೆಗಡಿ
ಆಕಸ್ಮಿಕವಾಗಿ ನಿಂತಾಗ
ಮೆಲ್ಲನೆ ತನ್ನಷ್ಟಕ್ಕೆ ತಾನೇ
ಉಸರಿದ,
"ಐ ಮಿಸ್ ಯು!"

--ಶ್ರೀ
೧೫-ಮಾರ್ಚ್-೨೦೧೩

Friday, February 15, 2013

ತಾಳೆ ಮರ, ರಾಜ ಮಾರ್ಗ, ಲಾಸ್ ವೇಗಸ್ ಮತ್ತು ಕಕ್ಕಸು

’ಬೆಂಗಳೂರು’ ಅಂತ ನಮ್ಮೂರಿಗೆ ಹೆಸರು ಹೇಗೆ ಬಂತಪ್ಪಾ ಅಂತ ತುಂಬಾ ಜನ ತಲೆ ಕೆಡಿಸಿಕೊಂಡಿರೋವ್ರು ನಂಗೊತ್ತು...
ಬೆಂಗಳೂರು ಅಂದ್ರೆ, " ’ಬೆಂದ ಕಾಳೂರು’, ಇಲ್ಲಿ ಒಂದಾನೊಂದು ಕಾಲದಲ್ಲಿ ಬೊಂಬಾಟಾಗಿರೋ ಬಿಸಿ-ಬಿಸಿ ಬೆಂದಿರೋ ಕಾಳು ಸಿಗ್ತಿತ್ತಂತೆ, ಬರ್ತಾ ಬರ್ತಾ, ಬೆಂದಕಾಳೂರು ಹೋಗಿ ಬೆಂಗಳೂರು ಆಯ್ತಂತೆ", ಅಂತ ಇವತ್ತಿಗೂ ನಂಬ್ಕೊಂಡಿರೋವ್ರೇ ಜಾಸ್ತಿ. ಕೊಂಚ ಅಲ್ಲಿ-ಇಲ್ಲಿ ಓದಿಕೊಂಡಿರೋವ್ರು, "ಯಾವ್ದೋ ಒಂದು ಅಜ್ಜಿ, ಸಖತ್ತಾಗಿರೋ ಬೆಂದ ಕಾಳೂರಿನ ಕಥೆ ಯಾವಾಗ್ಲೋ ಹೇಳಿದ್ದು, ಈಗ್ಲೂ ಜನ ನಂಬ್ತಾರಲ್ಲ", ಅಂತ ಹೇಳಿ, "ನಮ್ಮೂರು ರಾಜರಿದ್ದ ಊರು, ಇಲ್ಲಿ ಬೆಂಗಾವಲಿನ ಪಡೆ ಇತ್ತು, ಹಾಗಾಗಿ, "ಬೆಂಗಾವಲಿನ ಊರು"-->"ಬೆಂಗಾವಲೂರು", ಇದು ಕಾಲ ಕ್ರಮೇಣ ಬೆಂಗಳೂರು ಆಯಿತು ಎಂದು ವಾದ ಮಾಡೋವ್ರೂ ಸಿಕ್ತಾರೆ. ಇನ್ನೂ ಕೆಲವ್ರು, ಇವೆರಡೂ ಬುರುಡೆ, ನಮ್ಮೂರಿನ ಜಾಗ, ಬೇಂಗೆ ಮರಗಳಿಂದ(ರಕ್ತ ಹೊನ್ನೆ ಮರ/Indian Kino tree/Pterocarpus marsupium) ಇರೋ ಜಾಗವಾಗಿತ್ತು, ಅದಕ್ಕೇ, ಬೇಂಗೆಯಿಂದ ಕೂಡಿದ ಊರು, ಬೆಂಗಳೂರು ಅಂತ ಹೆಸರಾಯ್ತು ಅನ್ನೋವ್ರೂ ಇದಾರೆ. ಇರ್ಲಿ, ಇದ್ರಲ್ಲಿ ಯಾವ್ದು ನಿಜಾನೋ ನಂಗಂತೂ ಗೊತ್ತಿಲ್ಲ...ಆದ್ರೆ, ಈಗ, ಬೆಂಗಳೂರು -ಬರ್-ಬರ್ತಾ ಜನರ ಬಾಯಲ್ಲಿ ಬ್ಯಾಂಗಲೋರ್ ಆಗಿರದಂತೂ ನಿಜ...ಅಲ್ವಾ?

ಇರ್ಲಿ, ನಾನು ಏನೋ ಹೇಳೋಕ್ ಹೋಗಿ ಏನೋ ಹೇಳ್ಬಿಟ್ಟೆ...
ಬೆಂಗ್ಳೂರಿನ ಹೆಸರಿನ ಬಗ್ಗೆ ಅಷ್ಟೊಂದ್ ಜನ ತಲೆ ಕೆಡಿಸಿಕೊಂಡಿರಬೇಕಾದ್ರೆ, ಈಗ ಅಮೆರಿಕಾದಲ್ಲಿ ನಾನಿರೋ ಊರಿನ ಬಗ್ಗೆ ಸ್ವಲ್ಪನಾದ್ರೂ ತಲೆ ಕೆಡಿಸ್ಕೋಬಹುದಲ್ಲ...ಈಗ ನಾನಿರೋ ಊರಲ್ಲಿ ಮತ್ತು ಈ ರಾಜ್ಯದಲ್ಲಿ, ಐತಿಹಾಸಿಕವಾಗಿ ಸ್ಪ್ಯಾನಿಶ್ ಪ್ರಭಾವ ಹೆಚ್ಚಾಗೇ ಇದೆ...ನಮ್ಮ ಮನೆ ಹತ್ರ ಇರೋ, ಒಂದು ರಸ್ತೆ ಹೆಸರು "ಲಾಸ್ ಪಾಮಾಸ್(Las Palmas)" ಅಂತ...ನಾನು ಅದೆಷ್ಟೋ ದಿನದಿಂದ ಇದೇ ರಸ್ತೇಲಿ ಓಡಾಡ್ತಿದ್ರೂ, ಅಲ್ಲೇ ಇರೋ ಅದೆಷ್ಟೋ ತಾಳೆ ಮರಗಳು(Palm trees), ನೋಡಿದ್ರೂ, ರೋಡ್ ಹೆಸರಿಗೂ, ಮರಕ್ಕೂ ತಾಳೆ ಹಾಕಿರಲಿಲ್ಲ! ಇವತ್ತು ಅದ್ಯಾಕೋ ತಲೆಗೆ ಹೊಳೆದು, Palm Trees, ಅನ್ನೋದಿಕ್ಕೆ Palmas ಅಂತ ಸ್ಪ್ಯಾನಿಶ್ ನುಡಿಯಲ್ಲಿ ಇರಬಹುದಾ ಅಂತ ನೋಡಿದ್ರೆ, ಅದು ನಿಜ ಆಯ್ತು! ಇನ್ನು "Las" ಅನ್ನೋ ಪದಕ್ಕೆ ಹೆಚ್ಚಾಗಿ ಅರ್ಥ ಏನು ಇಲ್ಲ, ಇಂಗ್ಲಿಷ್ ನಲ್ಲಿ "The" ಇದ್ಯಲ್ಲಾ ಹಾಗೆ ಅಂತ ಕೂಡ ಗೊತ್ತಾಯ್ತು...ಹೀಗೆ ಓದ್ತಾ ಓದ್ತಾ, "Las" ಅನ್ನೋದು ಬಹುವಚನಕ್ಕೂ, "La" ಅನ್ನೋದನ್ನ ಏಕವಚನಕ್ಕೂ ಸ್ಪ್ಯಾನಿಶ್ ಭಾಷೆಯಲ್ಲಿ ಬಳಸ್ತಾರೆ ಅಂತ ತಿಳ್ಕೊಂಡೆ...ಹಾಗಾಗಿ, "Las Palmas" ಹೆಸರಿನ ಗುಟ್ಟು ರಟ್ಟಾಯ್ತು...ಸರಿ ಒಂದು ರಸ್ತೆ ಹೆಸರನ್ನ crack ಮಾಡಿದ ಮೇಲೆ, ಇನ್ನೂ ಒಂದೆರಡನ್ನ ಮಾಡಬಹುದಾ ಅಂತ ನೋಡಿದೆ...ನಮ್ಮ ಮನೆ ಹತ್ರ, ಇನ್ನೊಂದು ರಸ್ತೆ ಇದೆ, "Paseo Padre" ಅಂತ...ಇದೇನಿರಬಹುದು, ಅಂತ ಹೀಗೆ ಯೋಚಿಸ್ತಿದ್ದಾಗ, ಹೊಳೀತು, Padre ಅಂದ್ರೆ ’ಪಾದ್ರಿ’ ಇರ್ಬೇಕು...ಸರಿ, ಪಾದ್ರಿ ಅಂದ್ರೆ ಯಾರು? ಚರ್ಚ್ ಒಳಗಿರೋ ಅಪ್ಪ ಅಲ್ವೇ(Father)? ತಕ್ಷಣ, ಸ್ಪಾನಿಶ್ ಭಾಷೆನಲ್ಲಿ "Father" ಅನ್ನೋದಿಕ್ಕೆ ಏನು ಹೇಳ್ತಾರೆ ಅಂತ ನೋಡಿದೆ...ತಕ್ಕಳಪ್ಪ, "Padre" ಅಂತ ಉತ್ತರ ಬರೋದಾ...! ಓಕೆ...ಪಾದ್ರಿ ಇದ್ಮೇಲೆ ಚರ್ಚ್ ಸಿಗ್ಬೇಕು ತಾನೇ? ಈ ರಸ್ತೆ, ಒಂದು ಮೈಲಿ ಆಚೆಗೆ, "ಮಿಷನ್ ಸ್ಯಾನ್ ಹೋಸೆ" ಅನ್ನೋ ಜಮಾನದ ಚರ್ಚ್ ಇದೆ...ಈ ’ಪಸಿಯೋ’ ಅನ್ನೋ ಪಾದ್ರಿ ಅಲ್ಲೇ ಇದ್ದಿರ್ಬೇಕು ಅನ್ನೋದು ನನ್ನ ಊಹೆ...ಪಸಿಯೋ ಅನ್ನೋ ಪದಕ್ಕೆ "Walk/stroll" ಅಂತ ಅರ್ಥ ಕೂಡ ಇದೆ...

ಇರ್ಲಿ, ಮತ್ತೆ ಇನ್ನೊಂದು ರೋಡ್ ಹೆಸರು ಅರ್ಥ ಗೊತ್ತಾಗತ್ತೇನೋ ಅಂತ, "El Camino Real" ಅನ್ನೋದೇನಪ್ಪ ಯೋಚಿಸ್ತಿದ್ದೆ...ಗೊತ್ತಾಗ್ಲಿಲ್ಲ...ನನ್ಗೆ ಗೊತ್ತಾಗ್ದಿದ್ರೆ ಏನಂತೆ, ಗೂಗಲ್ ಇದ್ಯಲ್ಲ...ನೋಡಪ್ಪ ಕುತೂಹಲವಾಗಿರೋ ಉತ್ತರ ಬಂತು..."Real" ಅಂದ್ರೆ "Royal" ಅಂತ..."Camino" ಅಂದ್ರೆ ರಸ್ತೆ ಅಂತ ಅರ್ಥ, "El Camino Real" ಅಂದ್ರೆ, ರಾಜ ಮಾರ್ಗ ಅನ್ನಬಹುದು...ಈ ಕ್ಯಾಲಿಫೋರ್ನಿಯದ ರಸ್ತೆ ಆರು ನೂರು ಮೈಲಿ ಉದ್ದದ, ಒಂದಾನೊಂದು ಕಾಲದ ಹೈವೇ! ಹಾಗೆ ನೋಡಿದ್ರೇ, ರಾಜ ಮಾರ್ಗ ಎಲ್ಲಿ ಬೇಕಾದ್ರೂ ಇರಬಹುದು...ಸ್ಪೇನ್ ನಲ್ಲಿ ಹಲವಾರು "El Camino Real" ಗಳು ಇವೆಯಂತೆ...ಅರೇ! "Palm ==>Palmas", "Father==>Padre" ಆಯ್ತು..ಈಗ Real==>Royal ಹೆಚ್ಚು ಕಡಿಮೆ ಒಂದೇ ಥರ ಕೇಳತ್ತಲ್ಲ? ಹಾಗಿದ್ರೆ, ಸ್ಪಾನಿಶ್ ಮತ್ತು ಇಂಗ್ಲಿಶ್ ಅಕ್ಕ-ತಂಗಿ ಭಾಷೆ ಇದ್ದೇ ಇರ್ಬೇಕಲ್ಲ? ಹೇಗಪ್ಪಾ ಇದು ಅಂತ ಇನ್ನೂ ಸ್ವಲ್ಪ ಕೆದಕಿ ನೋಡಿದ್ರೆ, ಸ್ಪಾನಿಶ್ ಒಂದು ಲ್ಯಾಟಿನ್ ಭಾಷೆ, ಹಾಗೂ ಇಂಗ್ಲಿಷ್ ಮತ್ತು ಫ್ರೆಂಚ್ ಲ್ಯಾಟಿನ್ ಭಾಷೆಯಲ್ಲಿರೋ ಹಲವಾರು ಪದಗಳನ್ನು ಬಳಸತ್ತೆ...
ಹಾಗಾಗಿ, ಒಂದೇ ರೀತಿ ಕೇಳೋಂತ ಎಷ್ಟೋ ಪದಗಳನ್ನ ನೋಡಬಹುದು...ಹೇಗೆ ನಮ್ಮ ಕನ್ನಡ-ತಮಿಳ್ ಎರಡೂ, ಅಕ್ಕ-ತಂಗಿ ಭಾಷೆಗಳಾಗಿ, ಹಾಲು/ಪಾಲು, ಕೊಡು/ಕುಡು ಇತ್ಯಾದಿ, ಒಂದೇ ರೀತಿ ಕೇಳೋಂತ ಪದಗಳು ಇದ್ಯೋ ಇಲ್ಲೂ ಹಾಗೇನೆ...

ಆಗ್ಲಿಂದ, ನಮ್ಮ ಮನೇ ಹತ್ತಿರ ಇರೋ ವಿಷಯಗಳನ್ನೆಲ್ಲ ಹೇಳಿ ನಿಮ್ಮ ತಲೇ ತಿಂತಾ ಇದೀನಿ...ಸರಿ, ಕೊನೆದೊಂದು ಹೆಸರನ್ನ crack ಮಾಡಿ ನನ್ನ ಹರಿಕಥೆ ನಿಲ್ಲಿಸ್ತೀನಿ...
ಆಗ್ಲೇ ಹೇಳಿದ್ನಲ್ಲ, "Las" ಅಂದ್ರೆ ಹೆಚ್ಚು ಅರ್ಥ ಏನಿಲ್ಲ, "The" ಅಂತ ಅರ್ಥ ಬರತ್ತೆ ಅಂತ...ಪ್ರಪಂಚ್ದಲ್ಲೇ ಫೇಮಸ್ ಆಗಿರೋ "Las Vegas" ಅಂದ್ರೆ ಏನಪ್ಪ ಅರ್ಥ? ಸ್ಪಾನಿಶ್ ಭಾಷೆಯಲ್ಲಿ Vega ಅಂದ್ರೆ, Fields/meadows ಅಂತ ಅರ್ಥ...ನಮ್ಮ ಕನ್ನಡದಲ್ಲಿ ಬಯಲು/ಹೊಲ ಅನ್ನಬಹುದು, ಅಲ್ವಾ? ನಮ್ಮ ದೇಶದಲ್ಲಿರೋ ಹಳ್ಳಿಗಳಲ್ಲಿ, ಈಗ್ಲೂ ಕಕ್ಕಸು ಮಾಡಕ್ಕೆ, ಬಯಲಿಗೋ/ಹೊಲಕ್ಕೋ ಹೋಗೋದ್ರಿಂದ, ಕಕ್ಕಸು ಮಾಡಕ್ಕೇ ಹೋಗೋವಾಗ "ನಾನು Las Vegas ಹೋಗ್ಬರ್ತೀನಿ" ಅಂತ ಚೊಂಬು ಹಿಡ್ಕೊಂಡ್ ಹೋದ್ರೆ ತಪ್ಪಿಲ್ಲ...!

--ಶ್ರೀ

ಕೊಸರು: ಬೆಂಗಳೂರಿನ ಹೆಸರಿನ ಗುಟ್ಟು ತಿಳ್ಕೋಬೇಕಿದ್ರೆ ಇವನ್ನು ಓದಿ:
http://sallaap.blogspot.com/2008/06/blog-post_04.html
http://sampada.net/article/26376

Friday, January 25, 2013

’ದುರಂತ’ ಲೇಖಕನ ಸ್ವಗತ

ನನ್ನಿಂದಾಗಿ
ನೀನು ಸುರಿಸಿದ
ಕಣ್ಣೀರ ಹನಿ
ನನ್ನ
ಹಲವಾರು
ಯಶಸ್ವೀ ಬರಹಗಳಿಗೆ
ಬಂಡವಾಳ!

--ಶ್ರೀ
೨೪-ಜನವರಿ-೨೦೧೩