Tuesday, November 24, 2009

ಕೊರೆತ...



ಕಡಲ ಕೊರೆತಕೇನೋ
ಇಡಬಹುದು ಬಂಡೆಗಳ...
ನಿನ್ನ ಮೌನದಿಂದ
ಹೃದಯದಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಸಖೀ???

--ಶ್ರೀ

2 comments:

  1. "ಮೌನಂ ಸಮ್ಮತಿ ಲಕ್ಷಣಮ್". ನಿಮ್ಮ ಭಾವನೆಗಳಿಗೆ ಮೌನದಿಂದ ಒಪ್ಪುಗೆಯನ್ನು ಸೂಚಿಸಿದರೆ ನಿಮ್ಮಲ್ಯಾಕೆ ಕೊರೆತ?

    ಹೆಚ್ಚು ಗೃಹಸ್ತರು, ತನ್ನ ಸಖಿ ಮೌನದಿಂದಿರಬಾರದೆ, ಎಂದು ಆಶಿಸುತ್ತಿರಬೇಕಾದರೆ, ನೀವು .... ;-)

    (ನಮ್ಮಂತಹ ಬ್ರಹ್ಮಚಾರಿಗಳು ಇದನ್ನು ಮೀರಿ ಯೋಚಿಸಲಾರೆವು.)

    ReplyDelete
  2. ರಾಜೀವ,
    ಮೌನದ ಮುಖಗಳು ಹಲವು.
    ಜೋಡಿ ಹಕ್ಕಿಯನ್ನು ಮೊದಲು ಹುಡುಕಿಕೊಳ್ಳಿ...
    ಅದು ಹಾಡದಿದ್ದಾಗಾಗುವ ನೋವು ತಿಳಿಯುವುದು :)

    ReplyDelete